Gandhakuti

ಪ್ರವಾದಿ ಕೃತಿಯು ಖಲೀಲ್ ಜಿಬ್ರಾನ್ರವರ ಪ್ರಸಿದ್ಧ ಕೃತಿಗಳಲ್ಲಿ ಒಂದು. ಈ ಕೃತಿಯನ್ನು ಜಿಬ್ರಾನ್ ತನ್ನ ಹದಿನಾರನೇ ವಯಸ್ಸಿನಲ್ಲಿಯೇ ಬರೆಯಲ್ಪಟ್ಟಿದ್ದರೂ ಪ್ರಕಟಿಸಿದ್ದು ತನ್ನ ನಲವತ್ತನೇ ವಯಸ್ಸಿನಲ್ಲಿ ಅಂದರೆ  1923ರಲ್ಲಿ. ಪ್ರೇಮ, ಬದುಕು, ಧರ್ಮ, ಸಾವು, ವಿವಾಹ, ಮಕ್ಕಳು, ಮುಂತಾದ ಹತ್ತಾರು ಅಂಶಗಳ ಮಾತುಕತೆ ಇಲ್ಲಿ ಪ್ರಸ್ತಾಪಿತಗೊಂಡಿವೆ.  ಆರಂಭದಲ್ಲಿ ಈ ಕೃತಿಯು ಅಷ್ಟೇನು ಜನಪ್ರಿಯತೆ ಪಡೆಯದಿದ್ದರೂ ನಂತರದ ವರ್ಷಗಳಲ್ಲಿ ಕೃತಿಯ ಖ್ಯಾತಿಯು ಜನರ ಬಾಯಿಂದ ಬಾಯಿಗೆ ಹರಡಿ ಯಶಸ್ವೀ ಕೃತಿಗಳಲ್ಲಿ ಒಂದಾಯಿತು.

ಈ ಕೃತಿಯನ್ನು 1996ರಲ್ಲಿ ಡಾ. ಬಂಜಗೆರೆ ಜಯಪ್ರಕಾಶ್ ರವರು ಮೊದಲ ಬಾರಿಗೆ ಅನುವಾದ ಮಾಡಿದರು. ಪ್ರಸ್ತುತ ಕೃತಿಯು ಪ್ರವಾದಿ ಕೃತಿಯ ಮೂರನೇ ಆವೃತ್ತಿಯಾಗಿದ್ದು ಪ್ರತಿ ಸಾರಿಯೂ ಬಂಜಗೆರೆಯವರ ಕನ್ನಡ ಬದುಕಿನ ಸಹಜ ತಾತ್ವಿಕತೆಯ ಗರಡಿಯಲ್ಲಿ ಕನ್ನಡದ ತಾತ್ವಿಕತೆಯ ಭಾಗವಾಗಿ ಮೈದಾಳುತ್ತಾ ರೂಪುಗೊಂಡು ಕನ್ನಡ ಜನರ ಪ್ರವಾದಿಯಾಗಿದೆ.

ಖಲೀಲ್ ಗಿಬ್ರಾನ್ ಪ್ರವಾದಿ