ಪ್ರೊ. ಶಿವರಾಮಯ್ಯ
ಪ್ರಿಯ ಶಿವರಾಮಯ್ಯನವರಿಗೆ,
ನಿಮ್ಮ ಪ್ರೀತಿ ತುಂಬಿದ ಪತ್ರ ಬಂತು. ನಾನು ಸಾರ್ವಜನಿಕವಾಗಿ ಹೇಳಿಕೊಳ್ಳಲಾಗದ ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿದಿಲ್ಲ.
ಕರ್ನಾಟಕದ ಸಮಸ್ಯೆಗಳ ಬಗ್ಗೆ ನಮಗೆಲ್ಲಾ ಎಂದೂ ಕಾಳಜಿಗಳು ತುಂಬಿರಲಿ. ಅದನ್ನು ಬಗೆಹರಿಸುವ ಹೋರಾಟ ಮಾರ್ಗ ಹಾಗೂ ಸ್ವರೂಪಗಳ ಬಗ್ಗೆ ಮಾತ್ರ ಕಾಲಕಾಲಕ್ಕೆ ಸೂಕ್ತ ಆಲೋಚನೆ, ವಿಶ್ಲೇಷಣೆ ನಡೆಸಿ ತೀರ್ಮಾನ ಕೈಗೊಳ್ಳಬೇಕು.
ನಾನು ಮೊದಲಿನಂತೆ ಪೂರ್ಣಾವಧಿ ಹೋರಾಡಲು ನನ್ನ ಆರೋಗ್ಯ ಹಾಗೂ ಆಲೋಚನೆ ಎರಡೂ ಸಮ್ಮತಿಸುತ್ತಿಲ್ಲ.
ಜೀವನಕ್ಕಾಗಿ ದುಡಿಯುತ್ತಲೇ ಸಮಾಜಕ್ಕಾಗಿ ಶ್ರಮಿಸಬೇಕು. ಸಾಮಾಜಿಕ ಹೊಣೆಗಾರಿಕೆಯನ್ನು ‘ಸ್ವಾಮೀಜಿ’ಗಳಂತೆ ಹೊರುವುದು ಸ್ವಲ್ಪ ಕಷ್ಟ ಅನ್ನಿಸಿತು. ಅಗತ್ಯ ಬಂದರೆ ಎಲ್ಲರೊಂದಿಗೆ ಈಗಲೂ ಬೀದಿಗಿಳಿಯೋಣ. ನಿಮ್ಮ ಪ್ರೀತಿಗೆ ಕೃತಜ್ಞ
ಡಾ. ಬಂಜಗೆರೆ ಜಯಪ್ರಕಾಶ
(ಶಿವರಾಮಯ್ಯ ಅವರಿಗೆ ಜೇಪಿ ಬರೆದ ಪೋಸ್ಟ್ ಕಾರ್ಡ್)
ಪೀಠಿಕೆ:
1990ರ ಆರಂಭದ ದಶಕ. ಕರ್ನಾಟಕದಲ್ಲಿ ರೈತ ಸಂಘ ಹಾಗೂ ದಲಿತ ಸಂಘರ್ಷ ಸಮಿತಿ ಇವುಗಳ ಉತ್ಕರ್ಷತೆ ಇಳಿಮುಖವಾಗುತ್ತ ಬರುತ್ತಿತ್ತು. ಈ ಸಂದರ್ಭದಲ್ಲಿ ಅತ್ಯಂತ ತುಳಿತಕ್ಕೊಳಗಾದ ಮನುಷ್ಯರ ಪರ ಸಾಮಾಜಿಕ ನ್ಯಾಯಕ್ಕಾಗಿ ಹಕ್ಕೊತ್ತಾಯ ಮಾಡಲು “ಕರ್ನಾಟಕ ವಿಮೋಚನಾ ರಂಗ’ ಎಂಬ ಹೆಸರಿನ ಹೊಸ ಸಂಘಟನೆಯೊಂದು ಹುಟ್ಟಿಕೊಂಡಿತು. 1989ರ ನವೆಂಬರ್ 5 ರಂದು ಬೆಂಗಳೂರಿನ ವಸಂತನಗರದಲ್ಲಿ ಅದರ ಉದ್ಘಾಟನೆಯಾಯಿತು. ಆಳುವ ವರ್ಗದ ಕೆಲವರ ‘ಅಖಂಡ ಭಾರತ ಖಂಡವೆಂಬ ದುರಭಿಮಾನವನ್ನಾಗಲೀ ಅಥವಾ ‘ಸಂಕುಚಿತ ರಾಷ್ಟ್ರೀಯ ದುರಭಿಮಾನ’ವನ್ನಾಗಲಿ ಒಪ್ಪದೆ, ‘ರಾಷ್ಟ್ರೀಯತೆ ಎಂದರೆ ಚಾರಿತ್ರಿಕವಾಗಿ ವಿಕಸಿತವಾದ ಜನರ ಸ್ಥಿರ ಸಮುದಾಯ ಎಂದು ವಿವರಿಸಿಕೊಂಡಿತು. ಅದರ ಲಕ್ಷಣವೆಂದರೆ ಒಂದೇ ಭಾಷೆ, ಸಂಸ್ಕೃತಿ, ಭೂ ಪ್ರದೇಶ, ಚರಿತ್ರೆ, ಮನೋಭಾವ ಹಾಗೂ ನಾವು ಒಂದಾಗಿ ಬಾಳಬೇಕು ಎಂಬ ರಾಜಕೀಯ ಇಚ್ಛೆ ಇವುಗಳಲ್ಲಿ ಭಾಷೆ ಮತ್ತು ರಾಜಕೀಯ ಇಚ್ಛೆ ಮುಖ್ಯವಾದ ಪಾತ್ರವನ್ನು ನಿರ್ವಹಿಸುತ್ತವೆ.
ರಾಷ್ಟ್ರೀಯ ವಿಮೋಚನೆಯೆಂದರೆ ‘ಚಾರಿತ್ರಿಕವಾಗಿ ಬಂದಿರುವ ಈ ರಾಷ್ಟ್ರೀಯತೆಗಳು ತಮ್ಮ ಭವಿಷ್ಯದ ಒಡೆಯರು ತಾವೇ ಆಗಿರಬೇಕು ಎಂಬುದು. ಅಂದರೆ ಒಂದು ರಾಷ್ಟ್ರೀಯತೆಯ ಆಗುಹೋಗುಗಳನ್ನು ಮತ್ತೊಂದು ರಾಷ್ಟ್ರೀಯತೆ ಅಥವಾ ವರ್ಗ ನಿಯಂತ್ರಿಸುವುದರಿಂದ ಹೊರ ಬಂದು ಸ್ವತಂತ್ರವಾಗಿ ವಿಕಾಸಗೊಳ್ಳುವ ಪರಿಸ್ಥಿತಿಯನ್ನು ನಿರ್ಮಿಸಿಕೊಳ್ಳುವುದು ಎಂದು’. ಇದೆಲ್ಲ ಸ್ವಯಂ ನಿರ್ಣಯದಿಂದ ಆಗಬೇಕೇ ಹೊರತು, ಬಲ ಪ್ರಯೋಗದಿಂದಲ್ಲ. ಯಾವುದೇ ರಾಷ್ಟ್ರೀಯತೆಯನ್ನು ಅದರ ಇಚ್ಛೆಗೆ ವಿರುದ್ಧವಾಗಿ ಹಿಡಿತದಲ್ಲಿಟ್ಟುಕೊಳ್ಳುವುದನ್ನು ಆಕ್ರಮಣವೆಂದೇ ಕವಿರಂ ಪರಿಭಾವಿಸುತ್ತದೆ. “ಸಂಯುಕ್ತ ಭಾರತದಲ್ಲಿ ಸ್ವಂತಂತ್ರ ಕರ್ನಾಟಕ” ನಮ್ಮ ಆಶಯವೆಂದು ತನ್ನ ಪ್ರಣಾಳಿಕೆ ಮತ್ತು ಸಂವಿಧಾನದಲ್ಲಿ ಸ್ಪಷ್ಟಪಡಿಸಿತು. ಈ ಕಾರಣದಿಂದಾಗಿಯೇ ಕರ್ನಾಟಕ ವಿಮೋಚನಾರಂಗವು ಕಾಶ್ಮೀರ ಹಾಗೂ ಈಶಾನ್ಯ ಭಾರತದ ಹಲವು ರಾಷ್ಟ್ರೀಯ ಹೋರಾಟಗಳನ್ನು ಬೆಂಬಲಿಸಿತು.
ಕರ್ನಾಟದದ ಹೊಸ ಇತಿಹಾಸ ಹೋರಾಟಗಾರ ಬರೆದ ಮೇಕಿಂಗ್ ಹಿಸ್ಟರಿ ಕೃತಿಯ “ಸಾಕಿ”ಯವರ ಅಭಿಮತವುಳ್ಳ ಕವಿರಂನ ಈ ಪ್ರಣಾಳಿಕೆಯು ರಾಜ್ಯ ವಿಚಾರವಂತ ವಿಶ್ವವಿದ್ಯಾಲಯ ಹಾಗೂ ಕಾಲೇಜು ಅಧ್ಯಾಪಕರಿಗೆ ಅಚ್ಚುಮೆಚ್ಚಾಯಿತು. ಹಾಗಾಗಿ ಕವಿರಂ ನಿರ್ವಹಿಸುತ್ತಿದ್ದ ಸಭೆ ಸಮಾರಂಭಗಳಿಗೆ ಕೆಲವರು ಆಗಮಿಸುತ್ತಿದ್ದರು. ಅಂದು ವಸಂತ ನಗರದ ಉದ್ಘಾಟನಾ ಸಮಾರಂಭದಲ್ಲಿ ಕಾಣಿಸಿಕೊಂಡವರೆಂದರೆ ವರವರರಾವ್ (ಆಂಧ್ರ), ಗಿರಡ್ಡಿ ಗೋವಿಂದರಾಜು, ಎ.ರಾಮಲಿಂಗಂ, ಎ. ಮಾರ್ಕ್ಸ್,
ರಹಮತ್ ತರೀಕೆರೆ, ಕೆ. ವಿ. ನಾರಾಯಣ, ನಗರಗೆರೆ ರಮೇಶ್ ಮುಂತಾದವರು. ಆಗ ಕೊಡಗಿನ ಬೆಳ್ಳಿಯಪ್ಪ ರಾಜ್ಯಾಧ್ಯಕ್ಷರಾಗಿಯೂ, ಬಂಜಗೆರೆ ಜಯಪ್ರಕಾಶ್ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಅಲ್ಲದೆ ಸಿರಿಮನೆ ನಾಗರಾಜ್, ಸುಂದರ್, ನೂರ್ ಅಹ್ಮದ್, ಸಿ. ಜಿ. ಲಕ್ಷ್ಮೀಪತಿ, ಶಿವಸುಂದರ್, ಶಿವಲಿಂಗಂ, ಸಿದ್ದೇಗೌಡ, ಉಜ್ಜನಿಗೌಡ ಮುಂತಾದ ಯುವ ಕಾರ್ಯಕರ್ತರಲ್ಲದೆ ಸಿಪಿಐ (ಮಾವೋವಾದಿ)ನ ಅನೇಕ ಕಾರ್ಯಕರ್ತರೂ ಭಾಗವಹಿಸಿದ್ದರು. ನವ ಕರ್ನಾಟಕ ನಿರ್ಮಾಣ ಮಾಡಬೇಕೆಂದೂ, ಸಂಯುಕ್ತ ಭಾರತದಲ್ಲಿ ಸ್ವತಂತ್ರ ಕರ್ನಾಟಕ ಕಟ್ಟಬೇಕೆಂದೂ, ಸ್ವಾಭಿಮಾನ, ಸ್ವತಂತ್ರ, ಸ್ವಾವಲಂಬನೆ ಎಂಬ ಕರ್ನಾಟಕದ ಕನಸು ನನಸಾಗಿಸೋಣ ಎಂದೂ ತನ್ನನ್ನು ತೊಡಗಿಸಿಕೊಂಡ ಸಂಘಟನೆ ಕವಿರಂ
ಆ ದಿನಗಳಲ್ಲಿ ಬಂಜಗೆರೆ ಜಯಪ್ರಕಾಶರ ನಾಯಕತ್ವದಲ್ಲಿ ಕವಿರಂ ನಡೆಸಿದ ಪ್ರಮುಖ ಹೋರಾಟಗಳಲ್ಲಿ ಕೆಲವು ಇಂತಿವೆ:
- ರಟ್ಟಹಳ್ಳಿ ಮತ್ತು ಕೈಗಾ ಅಣು ಸ್ಥಾವರ ವಿರೋಧಿ ಹೋರಾಟ
- ಸಾತನೂರಿನ ಬಳಿ ಜಪಾನ್ ಟೌನ್‌ಶಿಪ್ ನಿರ್ಮಾಣ ವಿರೋಧಿ ಹೋರಾಟ ಹಾಗೂ ಟೌನ್‌ಶಿಪ್ ರದ್ಧತಿ.
- ತುಂಗಾಮೂಲದ ಗಂಗಡಿಕಲ್ಲು ಗಣಿಗಾರಿಕೆ ವಿರುದ್ಧ ನಡೆಸಿದ ಯಶಸ್ವಿ ಆಂದೋಲನ, ಪರಿಸರ ರಕ್ಷಣೆಗಾಗಿ ತುಂಗಾತೀರ ಜನತೆಯ ಹೋರಾಟಕ್ಕೆ
ಬೆಂಬಲ. - ಬೀದರ್‌ನ ಕೊಳಾಲ ಔಷಧೀಯ ಕೈಗಾರಿಕಾ ಮಾಲಿನ್ಯ ವಿರೋಧಿ ಹೋರಾಟ, ಮಾಲಿನ್ಯಕಾರಕ ಕೈಗಾರಿಕೆಗಳಿಗೆ ಬೀಗಮುದ್ರೆ,
- ಜಾಗತೀಕರಣ ವಿರೋಧಿ, ಸಾಮಾಜ್ಯಶಾಹಿ ವಿರೋಧಿ ಹೋರಾಟ ಇತ್ಯಾದಿ.
ಹೀಗೆ ಸಾಮಾಜಿಕ ನ್ಯಾಯಕ್ಕಾಗಿ ಸರ್ಕಾರದ ಜನ ವಿರೋಧಿ ನೀತಿಯನ್ನು ವಿರೋಧಿಸಿ ನಡೆಸಿದ ಕವಿರಂ ಹೋರಾಟದೊಂದಿಗೆ ಜೇಪಿಯ ನಾಯಕತ್ವವೂ ಬೆಸೆದುಕೊಂಡ ಚರಿತ್ರೆಯು ಇದಾಗಿದೆ. ಸುಮಾರು ಎರಡು ದಶಕಗಳ ಕಾಲ ಕರ್ನಾಟಕ ವಿಮೋಚನಾ ರಂಗದೊಂದಿಗೆ ಬೆರೆತು ಸಕ್ರಿಯವಾಗಿ ಪಾಲ್ಗೊಂಡ ಜೇಪಿ 1996ರ ನಂತರ (ವಿಶ್ವಸುಂದರಿ ಸ್ಪರ್ಧೆ 1996 ಡಿಸೆಂಬರ್) ಕ್ರಮೇಣ ಇವರ ಸಕ್ರಿಯ ಪಾಲ್ಗೊಳ್ಳುವಿಕೆ ಕಾಣದಾಯಿತು. ಇದುವರೆಗೆ ದೂರ ನಿಂತು ಅವರ ಪ್ರೀತಿ ತುಂಬಿದ ಕರೆಗೆ ಮಾರು ಹೋಗಿ ಅಂಥ ಹೋರಾಟದಲ್ಲಿ ಪಾಲ್ಗೊಂಡ ನನಗೆ ಮತ್ತು ನನ್ನಂಥವರಿಗೆ ಅವರ ಗೈರುಹಾಜರಿಗೆ ಕಾರಣ ತಿಳಿಯದೆ ಅವರಿಗೊಂದು ಪತ್ರ ಬರೆದೆ. ಅದರಲ್ಲಿ “ಸಧ್ಯ ರಾಜ್ಯದ ಸಮಸ್ಯೆಗಳೆಲ್ಲ ಬಗೆಹರಿದಿದ್ದಾವೋ ಅಥವಾ ಮತ್ತೇನಾದರೂ ಗುರುತರವಾದ
ಕಾರಣಗಳುಂಟೋ?”ಎಂದು. ಆಗ ಅದಕ್ಕೆ ಬಂಜಗೆರೆ ಬರೆದ ಪತ್ರದ ನಕಲನ್ನೇ
ಮೇಲೆ ಕೊಟ್ಟಿರುತ್ತೇನೆ. ಆ ಬಗ್ಗೆ ಹೆಚ್ಚಿಗೆ ಹೇಳಬೇಕಾಗಿಲ್ಲ. ಅವರ ದೃಷ್ಟಿ ಧೋರಣೆ ಏನೆಂಬುದು ಈ ಪತ್ರವೇ ಸಾದರಪಡಿಸುತ್ತದೆ. ಇದರಿಂದ ‘ನನ್ನ ಆಲೋಚನೆ ಮತ್ತು ಆರೋಗ್ಯ ಪೂರ್ಣಾವಧಿ ಹೋರಾಟಕ್ಕೆ ಸಮ್ಮತಿಸುತ್ತಿಲ್ಲ’ ಎಂಬ ಎರಡು ಸತ್ಯಾಂಶಗಳು ಧ್ವನಿಸುತ್ತವೆ. ಮೊದಲನೆಯದಾಗಿ ಆ ವೇಳೆಗಾಗಲೇ ಕವಿರಂ ಸಶಸ್ತ್ರ ಹೋರಾಟದಲ್ಲಿ ನಂಬಿಕೆಯಿರುವ ಸಿಪಿಐ(ಮಾವೋವಾದಿ) ಗುಂಪಿನತ್ತ ಸರಿಯುತ್ತಿದ್ದು, ನಕ್ಸಲ್ ಹೋರಾಟಗಾರರ ಮುಂಚೂಣಿ ದಂಡು ಎಂಬ ಆರೋಪದ ಮಾತುಗಳು ಕೇಳಿಬರುತ್ತಿದ್ದವು. ಆದರೆ ಶತೃವಿನೊಂದಿಗೆ ಮುಖಾಮುಖಿ ಸಂವಾದಕ್ಕೆಳಸುತ್ತಿದ್ದ ಬಂಜಗೆರೆಯಂತಹ ವಿಚಾರವಾದಿಗಳಿಗೆ ಇದು ಸರಿಬರಲಿಲ್ಲ. ಜೊತೆಗೆ ಅವರ ಆರೋಗ್ಯ ಕೂಡ ಯಾವತ್ತೂ ಹದಗೆಡುತ್ತಲೇ ಹೋಗುತ್ತಿತ್ತು. ಆಹಾರ ಸೇವನೆಗೆ ಮುನ್ನ ಶುಗರ್ ಬ್ಯಾಲೆನ್ಸ್‌ಗಾಗಿ ಅವರು ಇನ್ಸುಲಿನ್ ಇಂಜಕ್ಷನ್ ಚುಚ್ಚಿಕೊಳ್ಳುತ್ತಿದ್ದುದನ್ನು ಕಂಡು ನಾನೂ ಈಗಲೂ ಆತಂಕಪಡುತ್ತಿದ್ದೇನೆ.
ಇದಲ್ಲದೆ ಜೀವನಕ್ಕಾಗಿ ದುಡಿಯುತ್ತಲೇ ಸಮಾಜಕ್ಕಾಗಿ ಶ್ರಮಿಸಬೇಕು ಎಂಬ ಅವರ ಇನ್ನೊಂದು ಮಾತೂ ಸಹಕಾರಿಕೆಯದೇನೂ ಅಲ್ಲ. ಹಾರೋಹಳ್ಳಿ ಗುಡ್ಡದ ಬಳಿ ಸ್ವಲ್ಪ ಒಣ ಜಮೀನನ್ನು ಪಡೆದು ಅಲ್ಲಿ ರಾಗಿ, ಜೋಳ, ನೆಲಗಡಲೆ ಮುಂತಾಗಿ ಬೆಳೆಯುತ್ತಿದ್ದರು. ಮುಂಗಾರು ಆರಂಭವಾಯಿತೆಂದರೆ ನನ್ನ ಅವರ ಮಾತಿನ ನಡುವೆ ಮಳೆ, ಬೆಳೆ, ಗೆಮ್ಮೆ ಸಂಬಂಧವಾಗಿಯೂ ಇರುತ್ತಿತ್ತು. ಎಂದರೆ ಈ ಹೋರಾಟಗಾರ ವ್ಯಕ್ತಿಯಲ್ಲಿ ಕೃಷಿಕನೊಬ್ಬ ಸದಾ ಮನೆ ಮಾಡಿಕೊಂಡಿದ್ದಾನೆ ಎನ್ನಬಹುದು. ಆದುದರಿಂದಲೇ ಸುಭಾಷ್ ಪಾಳೇಕರ್ ಅವರ ನೈಸರ್ಗಿಕ ಕೃಷಿ ಪದ್ಧತಿಯಿಂದ ಪ್ರಭಾವಿತರಾಗಿದ್ದ ಜೇಪಿ ಇದೇ ವೇಳೆಯಲ್ಲಿ ‘ಎಗೆಸ್ಟ್’ ಎಂಬ ಇಂಗ್ಲಿಷ್ ಮೂಲದ “ಅಗೆತವಿಲ್ಲದ ತೋಟಗಾರಿಕೆ” -ಸಹಜ ತೋಟಗಾರಿಕೆಯಲ್ಲೊಂದು ಪ್ರಯೋಗ(1997) ಎಂಬ ಕೃತಿಯನ್ನು ಅನುವಾದಿಸಿ ಪ್ರಕಟಿಸಿದರು. ಹೀಗೆ ಸ್ವಯಂ ಕೃಷಿಯಿಂದ ಒಣ ಬೇಸಾಯವನ್ನು ಮಾಡುತ್ತ ತಮ್ಮ ಕುಟುಂಬಕ್ಕೆ ಸಾಕಾಗುವಷ್ಟು ರಾಗಿ ಮತ್ತಿತರ ಧಾನ್ಯಗಳನ್ನು ಬೆಳೆಯಬಲ್ಲ ಪ್ರಯೋಗಶೀಲರು ಇವರು.
ಕವಿರಂನಿಂದ ದೂರ ಸರಿದರಾದರೂ ಜೇಪಿ ಸುಮ್ಮನೆ ಮನೆಯಲ್ಲಿ ಕೂರಲಿಲ್ಲ. ಅವರ ತೌರು ಜಿಲ್ಲೆ ಚಿತ್ರದುರ್ಗ ಸೀಮೆಗೆ ಭದ್ರಾ ಬಲದಂಡೆ ನೀರು ಹಾಯಿಸಬೇಕೆಂಬ ಉತ್ಕಟೇಚ್ಛೆ ಅವರದು. ಚಳ್ಳಕೆರೆಯಂತಹ ಬರಡು ಸೀಮೆಯ ಬಂಜಗೆರೆ ಎಂಬ ಹಳ್ಳಿಯೊಂದರಿಂದ ಹುಟ್ಟಿ ಬಂದ ಅವರಿಗೆ ಇತ್ತಣ ನೀರಿನ ಬರವನ್ನೂ ಹೋಗಲಾಡಿಸಬೇಕೆಂಬ ಬಯಕೆ ಸಹಜವೇ. ಆದ್ದರಿಂದ ಚಿತ್ರದುರ್ಗ ಜಿಲ್ಲೆಗೆ ಪರ್ಯಾಯ ನೀರಾವರಿ ಯೋಜನೆ ರೂಪಿಸಲು ರಚನೆಯಾದ ಮುಕ್ತ ವಿಚಾರ ವೇದಿಕೆಯ ಅಧ್ಯಯನ ತಂಡದ ನಾಯಕತ್ವ ವಹಿಸಿದ್ದಲ್ಲದೆ, ಅದೇ ಜಿಲ್ಲಾ ನೀರಾವರಿ ಹೋರಾಟ
ಸಮಿತಿ ಜನಜಾಗೃತಿ ಜಾಥಾದ ನಾಯಕತ್ವ ಹಾಗೂ ನೀರಾವರಿ ಹೋರಾಟ ಸಮಿತಿಯ ಪಧಾನ ಸಂಚಾಲಕರಾಗಿಯೂ ಕಾರ್ಯ ನಿರ್ವಹಿಸಿದರು. ಇತ್ತ ಕನಕಪುರ ತಾಲ್ಲೂಕಿನಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ(ಎಸ್ ಇ ಯು ಡಿ)ಯು ವಶಪಡಿಸಿಕೊಳ್ಳಲು ಉದ್ದೇಶಿಸಿದ್ದ 3000 ಎಕರೆ ಕೃಷಿ ಭೂಮಿ ಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷರಾಗಿಯೂ ಕೆಲಸ ಮಾಡಿದರು. ಹಾಗೂ ಮಾದಿಗ ಜನಾಂಗ ತಮಗೆ ಪ್ರತ್ಯೇಕ ಮೀಸಲಾತಿ ಬೇಕೆಂದು ಹೋರಾಟಕ್ಕಿಳಿದಾಗ ಇವರ ಸಹಭಾಗಿತ್ವದ ಹೋರಾಟವೂ ಕೈ ಜೋಡಿಸಿತು.
ಹೀಗೆ ಜೇಪಿ ಕಳೆದ 2-3 ದಶಕಗಳಿಂದ ಅವಿರತ ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ಕಾರ್ಯತತ್ಪರರಾಗಿ ರಾಜ್ಯದ ತುಂಬೆಲ್ಲಾ ತಿರುಗಾಡಿದವರು. ಹೀಗಿರುತ್ತ ಹಿಂದೆ ಕವಿರಂನಲ್ಲಿ ಇವರಿದ್ದಾಗ, ಎಲೆಮರೆಯ ಕಾಯಂತೆ ಕೆಲಸ ಮಾಡುತ್ತಿದ್ದ ಪ್ರೇಮ್ ಉರುಫ್ ಸಾಕೇತ್ ರಾಜನ್‌ರವರ ಸಲಹೆ ಸೂಚನೆ ಮೇರೆಗೆ, ಜೇಪಿ ಏರ್ಪಡಿಸುತ್ತಿದ್ದ ಸಭೆ, ಸಮಾರಂಭ, ಪ್ರತಿಭಟನೆ, ಸತ್ಯಾಗ್ರಹ ಕಾರ್ಯಕ್ರಮಗಳಿಗೆ ವಿಶ್ವವಿದ್ಯಾಲಯ ಹಾಗೂ ಕಾಲೇಜು ಅಧ್ಯಾಪಕರನ್ನು ಆಹ್ವಾನಿಸುತ್ತಿದ್ದರು. ಇದರಿಂದ ಸಂಘಟನೆಗೊಂದು ನೈತಿಕ ಬೆಂಬಲ ಬರುತ್ತದೆ ಎಂಬುದು ಒಂದು ಕಡೆಗಾದರೆ, ತಮ್ಮ ಕ್ಯಾಂಪಸ್‌ನಿಂದ ಹೊರಗೆ ಹೋಗಿ ಹೊಸ ಇತಿಹಾಸ ಹೇಗೆ ರೂಪುಗೊಳ್ಳುತ್ತದೆ ಎಂಬುದರ ಅರಿವು ಅವರ ಪರಿಜ್ಞಾನಕ್ಕೆ ಬರಬಹುದು ಎಂಬುದು ಇನ್ನೊಂದಾಗಿತ್ತು.
ಹೀಗಿರುತ್ತ ಕವಿರಂ 1989ರ ನವೆಂಬರ್ 5ರಂದು ವಸಂತನಗರದಲ್ಲಿ ಹಮ್ಮಿಕೊಂಡಿದ್ದ ಅಖಿಲಭಾರತ ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆ(ಎಐಎಲ್‌ಆರ್‌ಸಿ)ಯ ಕಾರ್ಯಕ್ರಮಕ್ಕೆ ದೇಶದ ಹಲವಾರು ಕಡೆಯಿಂದ ಪ್ರಗತಿಪರ ಚಿಂತಕರು, ಬುದ್ಧಿಜೀವಿ ಅಧ್ಯಾಪಕರು, ಹೋರಾಟಗಾರರು ಹಾಜರಿದ್ದರು. ರಹಮತ್ ತರೀಕೆರೆಯವರ ಜೊತೆಗೆ ನಾನೂ ಸಹ ಹೋಗಿದ್ದೆ. ಅಂದು ಸಭಾಂಗಣದ ಸುತ್ತ ಗೋಡೆಗಳ ಮೇಲೆ ಬುದ್ಧ, ಬಸವ, ಸ್ವಾಮಿ ವಿವೇಕಾನಂದ, ಕುವೆಂಪು, ಟಿಪ್ಪು, ಭಗತ್‌ಸಿಂಗ್, ಅಂಬೇಡ್ಕರ್, ಗಾಂಧೀಜಿ ಮುಂತಾದವರ ಭಾವಚಿತ್ರಗಳು ರಾರಾಜಿಸುತ್ತಿದ್ದವು. ಅಲ್ಲದೆ;
ಯಾವ ಕಾಲದ ಶಾಸ್ತ್ರವೇನು ಹೇಳಿದರೇನು? ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?
ಕತ್ತಿ ಪರದೇಶಿಯಾದರೆ ಮಾತ್ರ ನೋವೇ? ನಮ್ಮವರೆ ಹದ ಹಾಕಿ ತಿವಿದರದು ಹೂವೇ?
ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ
ಏಳು, ಎಚ್ಚರಗೊಳ್ಳು, ನಡೆ ಗುರಿ ಮುಟ್ಟುವ ತನಕ
ಇಂಥ ನುಡಿಮುತ್ತುಗಳ ಜೊತೆಗೆ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮನ ವಚನಗಳ ಸಾಲುಗಳು ಅಲ್ಲಲ್ಲಿ ಬರೆಯಲ್ಪಟ್ಟಿದ್ದವು. ಇದೆಲ್ಲ ಕಂಡು ಕೇಳಿ ಬೆರಗುಗೊಂಡ ನಾಸ ನನ್ನಂಥವರು ಕರ್ನಾಟಕದಲ್ಲಿ ಇನ್ನೇನೋ ಹೊಸತೊಂದು ಕ್ರಾಂತಿ ಸಂಭವಿಸಲಿದೆ
ಎಂದುಕೊಂಡೆವು.
ಇದಾದ ನಂತರ ಕವಿರಂ ಜೊತೆಗಿನ ನನ್ನ ಒಡನಾಟ ಸ್ವಲ್ಪ ಹೆಚ್ಚಾಯಿತು. ಆದರೂ ಸರ್ಕಾರಿ ಕೆಲಸದಲ್ಲಿದ್ದ ನನಗೆ ಇಂಥ ಸಂಘಟನೆಯೊಂದಿಗೆ ಹೆಜ್ಜೆ ಹಾಕಬೇಕೋ ಬೇಡವೋ ಎಂಬ ಅಳುಕು ಕಾಡುತ್ತಿತ್ತು. ಆದ್ದರಿಂದ ಕೆಲವೊಮ್ಮೆ ಇದರ ಕಾರ್ಯವೈಖರಿಯನ್ನು ದೂರದಿಂದಲೇ ನೋಡುವುದೂ, ಕೆಲವೊಮ್ಮೆ ಜೇಪಿ ಕರೆದಲ್ಲಿಗೆ ಹೋಗಿ ಬರುವುದೂ ನಡೆಯಿತು. ಹಾಗಾಗಿ ಬೀದರ್‌ನ ಕೊಳಾರ ಕೈಗಾರಿಕಾ ಮಾಲಿನ್ಯ ವಿರೋಧಿ ಹೋರಾಟ ನಡೆಯುತ್ತಿದ್ದಾಗ ನಾನು ರಹಮತ್ ಅಲ್ಲಿಗೆ ಹೋಗಿದ್ದುಂಟು. ಆಗ ಬಹಿರಂಗ ಸಭೆಯೊಂದರಲ್ಲಿ ಜೇಪಿ ಪೊಲೀಸರಿಗೆ ನಿಮಗೆ ನೈತಿಕ ಧೈರ್ಯವಿದ್ದರೆ ಬನ್ನಿ ನಮ್ಮನ್ನೆಲ್ಲ ಅರೆಸ್ಟ್ ಮಾಡಿ, ಜನರ ನಡುವೆ ಇರುವಾಗ ನಮಗೆಂಥ ಭ್ರಮೆ?’ ಎಂದು ಮುಂತಾಗಿ ಸವಾಲು ಹಾಕುತ್ತಿದ್ದುದನ್ನು ಕಂಡು ನಾವು ಬೆಕ್ಕಸ ಬೆರಗಾಗಿ ಈ ‘ಯುವಕನಿಗೆ ಎಷ್ಟೊಂದು ಧೈರ್ಯ? ಎಷ್ಟೊಂದು ಬದ್ಧತೆ’ ಎಂದು ಹೆಮ್ಮೆಪಟ್ಟುಕೊಂಡೆವು. ಇಲ್ಲಿಂದಾಚೆಗೆ ನನ್ನ ಕವಿರಂ ಜೊತೆಗಿನ ಒಡನಾಟವೂ ಕೊಂಚ ಹೆಚ್ಚಾಯಿತು.
ಆದರೆ ಈ ಮೊದಲೆ ಹೇಳಿದಂತೆ, 1995ರ ನಂತರ ಜೆಪಿ ಸಂಘಟನೆಯಿಂದ ಹಿಂದೆ ಸರಿದರು. ನಾನು 1998ರಲ್ಲಿ ನಿವೃತ್ತಿ ಹೊಂದಿದೆ. ಇಷ್ಟರಲ್ಲಿ ಕಾವೇರಿ, ತುಂಗಭದ್ರಾ ನದಿಗಳಲ್ಲಿ ಸಾಕಷ್ಟು ನೀರು ಹರಿಯಿತು. ಅಷ್ಟೇ ಅಲ್ಲ ಕುದುರೆ ಮುಖ ಗಣಿಗಾರಿಕೆ ಹಾಗೂ ಅಭಿವೃದ್ಧಿ ಯೋಜನೆಗಳಿಂದ ಪಶ್ಚಿಮಘಟ್ಟ ಅರಣ್ಯ ಪರಿಸರಕ್ಕೆ ಆದ ಹಾನಿಯಿಂದ ತುಂಗಭದ್ರಾ ನದಿ 2002ರ ಸುಮಾರಿಗೆ ಬತ್ತುವ ಸ್ಥಿತಿ ತಲುಪಿತು. ಆ ಸಂದರ್ಭದಲ್ಲಿ ಶೃಂಗೇರಿಯ ಕಲ್ಕುಳಿ ವಿಠಲ ಹೆಗ್ಗಡೆಯ ನಾಯಕತ್ವದಲ್ಲಿ ತುಂಗಭದ್ರಾ ಉಳಿಸಿ ಹೋರಾಟ ಒಕ್ಕೂಟ’ ರಚನೆಗೊಂಡು ಶೃಂಗೇರಿ, ಕೊಪ್ಪ ಮೊದಲ್ಗೊಂಡು ಮಾನ್ವಿ, ಸಿರಗುಪ್ಪ, ಬಳ್ಳಾರಿ(3,7,2002 ರಿಂದ 13.7.2002)ವರೆಗೆ ನದೀ ಜನಜಾಥಾ ಹೊರಟು ದಾವಣಗೆರೆಯಲ್ಲಿ ಭಾರಿ ಸಮಾವೇಶ ನಡೆಯಿತು. ಇದರಲ್ಲಿ ಕವಿರಂ,
ಮಹಿಳಾ ಜಾಗೃತಿ ಹಾಗೂ ರಾಜ್ಯ ರೈತ ಸಂಘ ಮತ್ತು ದಲಿತ ಸಂಘರ್ಷ ಸಮಿತಿ ಮುಂತಾದ ಸಂಘಟನೆಗಳು ಭಾಗವಹಿಸಿದ್ದವು.
2002ರಲ್ಲಿ ಗುಜರಾತ್‌ನಲ್ಲಿ ಅಲ್ಪಸಂಖ್ಯಾತರ ಮೇಲೆ ಭೀಕರ ಹತ್ಯಾಕಾಂಡ ನಡೆಸಿದ ಸಂಘ ಪರಿವಾರವು ದಕ್ಷಿಣ ಭಾರತದಲ್ಲಿ ಪ್ರವೇಶ ಪಡೆಯುವ ಹುನ್ನಾರದಿಂದ ಬಾಬಾ ಬುಡನ್‌ಗಿರಿಯಲ್ಲಿ ಕಿತಾಪತಿ ತೆಗೆದು ಬಾಬಾ ಬುಡನ್‌ಗಿರಿಯನ್ನು ಮತ್ತೊಂದು ಅಯೋಧ್ಯೆ ಮಾಡುತ್ತೇವೆ ಎಂದು ದತ್ತ ಜಯಂತಿ, ಶೋಭಾ ಯಾತ್ರೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತು. ಆಗ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಎಂಬ ಹೊಸ ಸೌಹಾರ್ದ ಚಳುವಳಿಯೊಂದು ರೂಪುತಳೆಯಿತು. ಆಗಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರದು ಮೃದು ಹಿಂದುತ್ವವಾದಿ ಕಾಂಗ್ರೆಸ್ ಸರಕಾರ, ಆರ್‌ಎಸ್‌ಎಸ್ ನವರ ಕೋಮುವಾದಿ ನೀತಿಯನ್ನು ವಿರೋಧಿಸಿದ ವೇದಿಕೆಯ ಪ್ರಗತಿಪರರನ್ನು ಬಂಧಿಸಿತು. (2003 ಡಿಸೆಂಬರ್ 29) ಆದರೆ ಆಮೇಲೆ ಕಾಂಗ್ರೆಸ್ ಮತ್ತು ದಳ ಸಮ್ಮಿಶ್ರ ಸರ್ಕಾರ (20 ತಿಂಗಳು) ಹಾಗೂ ದಳ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರ ಆಡಳಿತ ಮಾಡಿ ಕೊನೆಗೆ 2009ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು.
ಇದೇ 2002ರಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನ ವಿರೋಧಿ ಒಕ್ಕೂಟ ಹುಟ್ಟಿಕೊಂಡು, ಆದಿವಾಸಿಗಳ ಸ್ವಾಯತ್ತತೆಗಾಗಿ ಪಶ್ಚಿಮ ಘಟ್ಟದ ಮೇಲೆ ಲಾಭಕೋರ ವಿದೇಶೀ ಆಕ್ರಮಣ ಕಂಪನಿಗಳು ಪ್ರವೇಶಿಸದಂತೆ ಕುದುರೆಮುಖ ಗಣಿಗಾರಿಕೆ ನಿಲ್ಲಲು ಧ್ವನಿ ಎತ್ತಿತು. ಪರಿಸರವಾದಿಗಳ ಹಾಗೂ ಕುದುರೆಮುಖ ಗಣಿಗಾರಿಕೆ ವಿರೋಧಿ ಒಕ್ಕೂಟಗಳು ಪ್ರತಿರೋಧ ಒಡ್ಡಿದ ಪರಿಣಾಮವಾಗಿ ಸುಪ್ರೀಂಕೋರ್ಟ್ 2005 ಡಿಸೆಂಬರ್‌ನಿಂದ ಕುದುರೆಮುಖ ಗಣಿಗಾರಿಕೆಯನ್ನು ಸ್ಥಗಿತಗೊಳಿಸಿತು. ಹೋರಾಟಗಾರರು ನಿಟ್ಟುಸಿರು ಬಿಟ್ಟರು. ಇತ್ತ ಸಮ್ಮಿಶ್ರ ಸರ್ಕಾರಗಳ ಅವಧಿಯಲ್ಲಿ ಕರಾವಳಿ ಪ್ರದೇಶದಲ್ಲಿ ಕೋಮು ಗಲಭೆಗಳಾದರೆ, ಪಶ್ಚಿಮಘಟ್ಟ ಅರಣ್ಯದಲ್ಲಿ ಹತ್ತಾರು ನಕ್ಸಲರ ಎನ್‌ಕೌಂಟರ್‌ಗಳು ಆಗಿಹೋದವು. ಆಗಿನ ಮುಖ್ಯಮಂತ್ರಿ ಧರ್ಮಸಿಂಗ್ “ನಕ್ಸಲ್ ಸಮಸ್ಯೆ ಆರ್ಥಿಕ ಮೂಲವಾದದ್ದು, ಅವರೊಂದಿಗೆ ಮಾತುಕತೆ ಮಾಡಿ ಬಗೆಹರಿಸಿಕೊಳ್ಳುತ್ತೇವೆ” ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಚಿರಂಜೀವಿಸಿಂಗ್ ಸಮಕ್ಷಮದಲ್ಲಿ ಮಾತುಕೊಟ್ಟರು. ಆದರೆ ಅತ್ತ ಪಶ್ಚಿಮಘಟ್ಟದ ದಟ್ಟಾರಣ್ಯದಲ್ಲಿ ಆದಿವಾಸಿಗಳ ಪುರೋಭಿವೃದ್ಧಿಗಾಗಿ ಹೋರಾಡುತ್ತಿದ್ದ ನಕ್ಸಲರ ಹತ್ಯೆ ನಡೆಸಿದರು. ಕಡೆಗೆ 2005ರ ಫೆಬ್ರವರಿ 6ರಂದು ಮೆಣಸಿನ ಹಾಡ್ಯದ ಬಳಿ ಸಾಕೇತ್ ರಾಜನ್ ಅವರ ಎನ್‌ಕೌಂಟರ್ ಕೂಡ ನಡೆದುಹೋಯಿತು. ಆ ದಿನ ಡಾ.ಎಲ್. ಬಸವರಾಜು ಅವರ ಹೆಸರಿನಲ್ಲಿ ನೀಡಲಾಗುತ್ತಿರುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ನಾನು ಮತ್ತು ಜೇಪಿ ಕೋಲಾರದಲ್ಲಿ ಭಾಗವಹಿಸಿದ್ದಾಗ ಆ ದುರ್ಘಟನೆ ತಿಳಿದು ಬಂದಿತು. ಆಗ ತುಂಬಾ ಆತಂಕಿತನಾಗಿದ್ದ ನನಗೆ ಜೇಪಿ ಹೇಳಿದ್ದು “ನಮ್ಮ ಪೊಲೀಸರಿಗೆ
ಯಾರು ಆಕ್ಟಿವಿಸ್ಟ್, ಯಾರು ಕ್ರಿಮಿನಲ್ ಎಂಬ ಪರಿಜ್ಞಾನವೇ ಇರುವುದಿಲ್ಲವಲ್ಲ ಸಾರ್, ಏನು ಮಾಡುವುದು?” ಎಂದರು ವಿಷಾದಭರಿತ ದುಃಖದಿಂದ, ಯಾಕೆಂದರೆ ಮೈಸೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಕಾಲದಿಂದಲೂ ಇವರಿಗೆ ಸಾಕೇತ್ ಸಂಪರ್ಕವಿದ್ದಿತು. ಆಗ ನನ್ನ ಅರಿವಿಗೆ ಬಂತು, ಜೇಪಿ ಯಾಕಾಗಿ ಕವಿರಂನಿಂದ ದೂರ ಸರಿದರು? ಮತ್ತು ಇವರೂ ಸಾಕೇತ್ ಅವರ ಜೊತೆಗೆ ಹೆಜ್ಜೆ ಹಾಕಿದ್ದರೆ? (`ಹೆಜ್ಜೆ ಹಾಕಿದ್ದರೆ!’ ನಾನು ಇವತ್ತು ಹೀಗೆ ಬರೆಯುವುದಕ್ಕೆ ಸಾಧ್ಯವಿರಲಿಲ್ಲ ಎಂಬುದನ್ನು
ಓದುಗರೇ ಊಹಿಸಬಹುದು).
ಕವಿರಂನಿಂದ ಜೇಪಿಯ ಹಿಂಜರಿತವನ್ನು ಪ್ರೊ.
ನಗರಿ ಬಾಬಯ್ಯನವರ ಬಳಿ ಬಹಳ ಹಿಂದೆಯೇ ನಾನೊಮ್ಮೆ ಪ್ರಸ್ತಾಪಿಸಿದಾಗ ಅವರು *ಣ ಹುಡುಗ, ಅಪಾಯದ ಮುನ್ಸೂಚನೆಯನ್ನು ಮೊದಲೆ ಬಲ್ಲವನಾಗಿದ್ದ
ಎಂದಿದ್ದ ಮಾತು ಸಹ ನೆನಪಾಯಿತು.
ಎಸ್. ಎಂ. ಕೃಷ್ಣರ ಅವಧಿಯಲ್ಲೇ ಬಳ್ಳಾರಿ ಗಣಿಗಾರಿಕೆಗೆ ಹಸಿರು ನಿಶಾನೆ ದೊರೆತಿತ್ತು. ಕಾಂಗ್ರೆಸ್, ಜೆಡಿಎಸ್ ಮತ್ತು ಜೆಡಿಎಸ್, ಬಿಜೆಪಿ ಸಮ್ಮಿಶ್ರ ಆಳ್ವಿಕೆಯಲ್ಲಿ ನಾಯಿ ಕೊಡೆಗಳಂತೆ ಅಕ್ರಮ-ಸಕ್ರಮ ಗಣಿ ಕಂಪನಿಗಳು ಕಾಣಿಸಿಕೊಂಡವು. ಬಿಜೆಪಿ ಆಳ್ವಿಕೆ(2009) ಯ ಮೊದಲ ಮೂರು ವರ್ಷವಂತೂ ತುಮಕೂರು, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳಲ್ಲಿ ಎಲ್ಲೆಂದರಲ್ಲಿ ಗಣಿಗಾರಿಕೆ ಧೂಳು, ಭೂಮಿ, ಆಕಾಶ ಮುತ್ತಿತು. ದಿನನಿತ್ಯ ಸಾವಿರಾರು ಟ್ರಕ್ಕುಗಳ ತುಂಬ ಕಬ್ಬಿಣದ ಅದಿರು ಪೂರ್ವ-ಪಶ್ಚಿಮ ಬಂದರುಗಳತ್ತ ಸಾಗಿಸಲ್ಪಟ್ಟಿತು. ಮಂತ್ರಿ ಜನಾರ್ಧನರೆಡ್ಡಿ ಮತ್ತು ಅವರ ಪಟಾಲಂ ಗಣಿಗಾರಿಕೆಯನ್ನು ಕುರಿತು ‘ರೆಡ್ಡಿ ರಿಪಬ್ಲಿಕ್’ ಎಂದು ಜನ ಕರೆಯಲಾರಂಭಿಸಿದರು. ಕಾಂಗ್ರೆಸ್ ನಾಯಕತ್ವದ ಈ ಗಣಿಗಾರಿಕೆ ವಿರೋಧಿ ಜಾಥಾ 2010ರ ಜುಲೈನಲ್ಲಿ ತುಮಕೂರು, ಚಿತ್ರದುರ್ಗ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಸಂಚರಿಸಿ ಪ್ರತಿಭಟಿಸಿತು. ಅನೇಕ ಪ್ರಗತಿಪರ ಸಂಘಟನೆಗಳು ಪಾಲ್ಗೊಂಡಿದ್ದವು. ಇದರಲ್ಲಿ ಬಂಜಗೆರೆ ಜಯಪ್ರಕಾಶ್ ಕೂಡ ಒಬ್ಬರಾಗಿದ್ದರು. ಆದರೆ ಇಷ್ಟರಲ್ಲಾಗಲೇ ಕವಿರಂ ಸಂಘಟನೆಯೇ ವಿಸರ್ಜನೆಗೊಂಡಿತ್ತು.
ಕ್ರಾಂತಿಕಾರಿ ಕವಿ
ಜೇಪಿ 1990ರ ಉತ್ತರಾರ್ಧದಿಂದ ತಮ್ಮದೇ ಆದ ಅನಿವಾರ್ಯ ಕಾರಣಗಳಿಂದಾಗಿ ಕವಿರಂ ಸಂಘಟನೆಯ ಮುಂಚೂಣಿಯಿಂದ ಹಿಂದೆ ಸರಿದರಾದರೂ ‘ಹಿಂಸೆಯೇ ಬದಲಾವಣೆಯ ದಾರಿ’ ಎಂಬ ಮಾರ್ಕ್ಸ್‌ವಾದಿ ಸಿದ್ಧಾಂತದಿಂದ ಅವರ ಕಾವ್ಯ ದೂರ ಸರಿಯಲಿಲ್ಲ. ಜೊತೆಗೆ ಹಿಂದುಳಿದ ದಲಿತ ಅಲೆಮಾರಿ ಸಂಘಟನೆಗಳಿಂದಲೂ ಈ ಕವಿ ಸಾಕಷ್ಟು ಪ್ರಭಾವಿತರಾಗಿದ್ದಾರೆ. ಈ ನೆಲೆಯಲ್ಲಿ ಅವರ ‘ಮಹೂವಾ’ (1992) ಹಾಗೂ ‘ಸಾಲವೃಕ್ಷ’ ಎಂಬ ಕವನಗಳನ್ನು ಪರಿಶೀಲಿಸಬಹುದು. ಇವು
ಜೇಪಿ ಕಾವ್ಯದ ಬದ್ಧತೆಯನ್ನೂ ಹಕ್ಕೊತ್ತಾಯದ ಬಗೆಯನ್ನೂ ಚೆನ್ನಾಗಿಯೇ ಪ್ರತಿಫಲಿಸುತ್ತವೆ. ‘ಮಹೂವಾ’ ಎಂಬುದು ದಂಡಕಾರಣ್ಯ ಜಾರ್ಖಂಡ್ ಪ್ರಾಂತ್ಯದಲ್ಲಿ ಬೆಳೆವ ಒಂದು ಬಗೆಯ ಹೂಬಿಡುವ ಸಸ್ಯ ಜಾತಿ. ಇದರ ಹೂವನ್ನು ಆದಿವಾಸಿ ಜನ ಅನ್ನ ಮಾಡಲು, ಸುರೆ ತಯಾರು ಮಾಡಲು ಹಾಗೂ ಅಲಂಕಾರಕ್ಕೂ ಬಳಸುತ್ತಾರೆ. ಈಚೆಗೆ ಅಲ್ಲಿನ ಸರ್ಕಾರ ಇದು ಸರ್ಕಾರಿ ಸ್ವತ್ತೆಂದು ಪರಿಗಣಿಸಿ ಆದಿವಾಸಿ ಜನ ಬಳಸದಂತೆ ನಿರ್ಬಂಧಿಸಿತು. ಆದರೆ ಆದಿವಾಸಿಗಳು ಪ್ರತಿಭಟಿಸಿ ಹೋರಾಟಕ್ಕೆ ನಿಂತರು. ಅರಣ್ಯದಲ್ಲಿ ಬೆಳೆವ ‘ಮಹೂವಾ’ ಹೀಗೆ ಪ್ರಜಾ ಸಮರಕ್ಕೆ ನಾಂದಿ ಹಾಡಿತು. ಹೀಗೆ ರಾಷ್ಟ್ರದ ನಾನಾಕಡೆ ಅರಣ್ಯ ಸಂಪನ್ಮೂಲಗಳನ್ನು ಅಲ್ಲಿನ ಆದಿವಾಸಿ ಬುಡಕಟ್ಟುಗಳು ಮುಟ್ಟಬಾರದೆಂದು ಸರ್ಕಾರ ಕಟ್ಟಲೆ ವಿಧಿಸುತ್ತಿದೆ. ಆದರೆ ಜನರು ತಮ್ಮ ಯಾವತ್ತಿನ ಬದುಕುವ ಹಕ್ಕೊತ್ತಾಯವನ್ನು ಮಂಡಿಸುತ್ತಿದ್ದಾರೆ. ‘ಸಾಲವೃಕ್ಷ’ ಎಂಬ ಬಹೂಪಯೋಗಿ ಮರವೂ ಬುಡಕಟ್ಟು ಜನರಿಗೆ ಅಗತ್ಯ ಅನಿವಾರ್ಯವಾಗಿ ಬೇಕಾಗಿದ್ದು ಜನ ಸರ್ಕಾರದ ನಿರ್ಬಂಧವನ್ನು ಮೀರಬಹುದು ಎಂಬ ಧ್ವನಿ ಈ ಪದ್ಯಗಳ ತಾತ್ಪರ್ಯ, ಉದ್ಯಮಪತಿಗಳ ಲಾಭಕ್ಕೆ ಸೂರೆ ಹೋಗುವ ಈ ಹೂಗಿಡಗಳು ಬಡವರಿಗೆ ಯಾಕೆ ದೊರೆಯಬಾರದು ಎಂಬುದು ಈ ಕಾವ್ಯ ಹೊಮ್ಮಿಸುವ ಸಾಮಾಜಿಕ ನ್ಯಾಯ, ಕವಿ ಕ್ರಾಂತಿದರ್ಶಿ ತಾನೆ?
ಕ್ರಾಂತಿಕಾರನೊಬ್ಬ ಉತ್ಸುಕನಾಗಿ ವ್ಯವಸ್ಥೆಯ ವಿರುದ್ಧ ಬಂಡೆದ್ದು ನಿಲ್ಲುವುದು ಸ್ವಾಭಾವಿಕ. ಇದಕ್ಕೆ ಜೇಪಿ ಕಾವ್ಯ ಹೊರತಲ್ಲ. ಆದರೆ ಫ್ಯಾಸಿಸ್ಟ್ ಪ್ರಭುತ್ವದ ಹಲ್ಲುಗಳು ಬಲು ಹರಿತ. ಆ ದುಷ್ಟ ವ್ಯಾಘ್ರ ಪಂಜದ ಏಟಿನಿಂದ ಘಾಸಿಗೊಂಡ ಕವಿ ಚೇತನ ಆ ತನ್ನ ಅನುಭವವನ್ನು ಹೇಳಲಾರದೆ ಹೇಳಿದರೆ ತಾಳಲಾರದೆ (ಜೇಪಿ ಅನೇಕ ಸಾರಿ ಪೊಲೀಸ್ ಠಾಣೆ ಅತಿಥಿಯಾಗಿದ್ದಾರೆ. ಅಲ್ಲಿ ಕುಳಿತು ಕವನ ರಚಿಸುತ್ತಿರುವ ಫೋಟೋ ಇದೆ) ತಲ್ಲಣಿಸುತ್ತ ‘ನನ್ನಿಂದ ಮಾತಿಲ್ಲ’ ಎಂಬ ಕವಿತೆಯಲ್ಲಿ (ಕಳೆದ ಕಾಲದ ಪ್ರೇಯಸಿಯರಿಗೆ ಎಂಬ ಸಂಕಲನದಲ್ಲಿದೆ) ಮಾರ್ಮಿಕವಾಗಿ ಅಭಿವ್ಯಕ್ತಿ ನೀಡುತ್ತದೆ, ಕಡಿಯಲು ತಂದ ಆಡು ಆಕ್ರಂದಿಸುವಂತೆ:
ನಾನೆಂದೂ ಮಾಡದ ಈ ಪಾತಕಗಳಿಗೆ ತಪ್ಪೋಪಿಗೆ ನುಡಿಯುವುದು ಹೇಗೆ?
ಯಾವಾಗ ಪಡೆಯಲಾಯಿತು ಸಹಿ
ಇಷ್ಟೊಂದು ಕರಾರುಗಳಿಗೆ?
ಅಯ್ಯೋ! ನನ್ನಿಂದ ಮಾತಿಲ್ಲ, ನನ್ನಿಂದ ಮಾತಿಲ್ಲ.
ಹೀಗೆ ಕಾವ್ಯದ ಹಕ್ಕಿ ಎನ್‌ಕೌಂಟರ್‌ಗೆ ತುತ್ತಾಗಿದೆ. ಆಗ ನನ್ನಂಥವರು ‘ಯಾಕಾಗಿ ಸಂಘಟನೆಯಿಂದ ನೀವು ಹಿಂದೆ ಸರಿದಿರಿ?’ಎಂದರೆ ಮತ್ತೇನು ಉತ್ತರಿಸಿಯಾನು ಕವಿ! ಈಗ ಅವನಿಗಿರುವುದೊಂದೇ ದಾರಿ. ತನ್ನ ಕಳೆದ ಕಾಲದ ಪ್ರೇಯಸಿಯರ
ಕಾವ್ಯ
(ಹೋರಾಟದ ನೆನಪುಗಳು) ಮಡಿಲಲ್ಲಿ ತನ್ನ ತಲೆಯಿಟ್ಟು ಆ ನೊಂದ ನೋವನ್ನು ಅವರ ಒಡಲಿಗೆ ಪಿಸುಗುಟ್ಟುವುದು, ಖಾಸಗಿ ಅಪೀಲಿನಂತಿರುವ ಬಂಜಗೆರೆ ಸಾರ್ವತ್ರಿಕ ಆಯಾಮವನ್ನು ಪಡೆದು ಸಾಧಾರಣೀಕರಣಗೊಳ್ಳುತ್ತದೆ ಹೀಗೆ. ಮೂರು ತೆರೆನಾಗಿರುತ್ತಾರೆ. ಅರಮನೆ ಕವಿ, ಗುರುಮನೆ ಕವಿ ಮತ್ತು ಸೆರೆಮನೆ ಕವಿ ಇಲ್ಲಿ ಜೇಪಿ ಕವನಗಳ ಬಗ್ಗೆ ಹೇಳಿದ ಒಂದು ಪ್ರಸಂಗ ನೆನಪಾಗುತ್ತದೆ. ಕವಿಗಳಲ್ಲಿ ಎಂದು, ಎರಡು ವರ್ಷದ ಕೆಳಗೆ ಸರ್ಕಾರಿ ಕಲಾ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ
‘ಸೆರೆಮನೆ ಸಂವೇದನೆ ಮತ್ತು ಸಾಹಿತ್ಯ’ ಎಂಬ
ಅವರು ಕವಿಗಳನ್ನು ಕವಿತ್ರಯರೆಂದು ಹೀಗೆ ವಿಭಾಗಿಸಿದರು. ಅರಮನೆ ಕವಿ ಎಂದರೆ ರಾಜಮಹಾರಾಜರ ಆಸ್ಥಾನದಲ್ಲಿದ್ದುಕೊಂಡು ಪಂಡಿತರಿಗೆ ವಿವಿಧ ಕಲಾಪಂಡಿತರರ ಮೆಚ್ಚುಗೆಯಾಗುವ ಕವಿತೆಯನ್ನು ರಚಿಸಿ ರಾಜನಿಂದ ಪದವಿ, ಪ್ರಶಸ್ತಿಗಳನ್ನು ಪಡೆಯುವಾತ; ಎರಡನೆಯವನು ಗುರುಮನೆ ಕವಿ. ಈತ ಮಠಗಳಲ್ಲಿ, ವಿಶ್ವವಿದ್ಯಾಲಯಗಳ ಆವರಣಗಳಲ್ಲಿ ಸುತ್ತಾಡುತ್ತ ತನ್ನ ಗುರುಗಳನ್ನು ಮೆಚ್ಚಿಸಿ ಬರೆದು ಜೀವನೋಪಾಯಕ್ಕೊಂದು ಉದ್ಯೋಗ ದೊರಕಿಸಿಕೊಳ್ಳುದಾತ; ಮೂರನೆಯವನ ಗ ಜನರ ಮಧ್ಯೆ ನಿಂತು ಹೋರಾಟನಿರತ ಕವಿ. ಅವನು ಸೆರೆಮನೆಗೂ ಹೋಗು ಸಿದ್ದ. ಇವನ ಧೀಮಂತಿಕೆ ಹೇಗಿರುತ್ತದೆಂದರೆ ಪಂಪ ಕವಿ ಉದ್ಧರಿಸುವಂತೆ ಇತರರು ಕೊಡುವುದೇನು, ಇತರರು ಮಾಡುವುದೇನು?ನಿಶ್ಚಯವಾಗಿ ಇತರರಿಂದ ಆಗಬೇಕಾದುದೇನು?’ ಇಂಥವನ ಕಾವ್ಯ ಅನುಗಾಲ ನಿಲ್ಲತಕ್ಕದ್ದು ಎಂದು ಹೇಳಿದರು. ಈ ಕುರಿತು ನಾನು ಕವಿತ್ರಯರು’ ಎಂಬ ಪದ್ಯವೊಂದನ್ನು ಬರೆದಿದ್ದೆ, ಆದರೆ ಅದು ಸಧ್ಯ ಸಿಗಲೇ ಇಲ್ಲ. ) ಜಪ ರದದ ದಿರ೪
ಸಂಶೋಧಕ ಸಾಹಿತ್ಯ, ಸಂಸ್ಕೃತಿ ಹಾಗೂ ಲೋಕದರ್ಶನಗಳ ಬಗ್ಗೆ ಅಪಾರ ಅಧ್ಯಯನ ಮಾಡುತ್ತ ಬರುತ್ತಿರುವ ಬಂಜಗೆರೆ ಯಾವುದೇ ವಸ್ತು, ವಿಷಯವನ್ನು ಕುರಿತು ಅಪ್ಪ ಹಾಕಿದ ಆಲದ ಮರ ಎಂದು ಒಂದೇ ಪಟ್ಟಿಗೆ ಒಪ್ಪುವವರಲ್ಲ, ಅತ್ಯಂತ ಪ್ರಗತಿಪರ ಮನೋಧರ್ಮದವರು. ಇವರ ಸಂಶೋಧನಾ
ಧನಾ ಪ್ರವೃತ್ತಿ ನನಗೆ
ನನಗೆ ತಿಳಿದ ಮಟ್ಟಿಗೆ 1992ರ ಸುಮಾರಿಗೆ ಕಾಣಿಸಿಕೊಂಡಿತು. 1992 ಫೆಬ್ರವರಿ ತಿಂಗಳ ರಹಮತ್ ತರೀಕೆರೆಯವರ ಪಾವಿತ್ರ್ಯ ನಾಶವೂ ಪ್ರತಿ ಸಂಸ್ಕೃತಿ ನಿರ್ಮಾಣವೂ ಎಂಬ ಲೇಖನವೊಂದು ಪ್ರಕಟವಾಯಿತು. ಈ ಲೇಖನ ರಹಮತ್ ತರೀಕೆರೆಗೆ ಸಾಕಷ್ಟು ಹೆಸರನ್ನು ತಂದುಕೊಟ್ಟಿತು. ಆ ಲೇಖನಕ್ಕೆ ಜೇಪಿ ಪ್ರತಿಕ್ರಿಯಿಸುತ್ತಾ “ಯಾವಾಗ ಕೈತಪ್ಪಿ ಹೋಗುತ್ತಿದ್ದ ಕೆಳವರ್ಗದ ಸಂಸ್ಕೃತಿಯನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುವ
ಚಳವಳಿಗಳ
ಡಾ.ರಹಮತ್
ಸ್ಟ್ರಾಟಜಿಯಾಗಿ ಸಂಸ್ಕೃತವನ್ನು ಕೈಬಿಟ್ಟದ್ದು” ಎಂಬುದೂ ಹೊಳೆಯುವುದಿಲ್ಲ. ಭಕ್ತಿಪಂಥದ ನೆತ್ತಿಯ ಮೇಲೆ ಎತ್ತಿಹಾಕಿದ ಹಲಗೆ ತುಂಬಾ ಭಾರವಾದದ್ದು ಎನ್ನದೆ ವಿಧಿಯಿಲ್ಲ” ಎಂಬುದಾಗಿ ಹೇಳಿ ‘ಪರಂಪರೆಯಲ್ಲಿ ಭಕ್ತಿಪಂಥದ ಪಾತ್ರವೇನು?’ಎಂದು ತಮ್ಮ ಲೇಖನದಲ್ಲಿ (ಸಂಕ್ರಮಣ- ಏಪ್ರಿಲ್ 1992) ಪ್ರಸ್ತುತಪಡಿಸಿದರು. ಇದಕ್ಕೆ ಉತ್ತರವಾಗಿ ರಹಮತ್ ತರೀಕೆರೆ ಪುನಃ “ಪರಂಪರೆಯನ್ನು ಬೆಲೆಗಟ್ಟುವ ವಿಧಾನ ಯಾವುದು?” (ಸಂಕ್ರಮಣ- ಜೂನ್, ಜುಲೈ 1992) ಎಂದು
ಬರೆದರು.
ಇವರಿಬ್ಬರ ಲೇಖನಗಳನ್ನು ಗಮನಿಸುತ್ತಾ ಬಂದ ನಾನು “ಕರ್ನಾಟಕದಲ್ಲಿ ಭಕ್ತಿಪಂಥ ಹಾಗೂ ಕನ್ನಡ ಭಾಷಾ ಮಾಧ್ಯಮ” (ಸಂಕ್ರಮಣ- ಸಂಪುಟ 21, ಸಂಚಿಕೆ 9 ಸೆಪ್ಟೆಂಬರ್) ಎಂದು ಬರೆದು ದಾಸರ ಭಕ್ತಿಪಂಥ ಜನರ ಬಳಿಗೆ ಹೋಗಲು ಅನಿವಾರ್ಯವಾಗಿ ದೇಶ ಭಾಷಾ ಮಾಧ್ಯಮ(ಕನ್ನಡ)ವನ್ನು ಕನ್ನಡವನ್ನು ಕೈಗೆತ್ತಿಕೊಂಡಿತು ಎಂದು ವಿವರಿಸಿದೆ. ಇದನ್ನೆಲ್ಲಾ ಗಮನಿಸುತ್ತ ಬಂದ ಮೈಸೂರಿನ ಗೆಳೆಯ ಶಿವರಾಮು ಕಾಡನಕುಪ್ಪೆಯವರು ನೀವು ಮೂರೂ ಜನಕ್ಕೆ ಒಂದು ಸನ್ಮಾನ ಸಭೆ ಏರ್ಪಡಿಸಬೇಕು’ ಎಂದದ್ದು ನೆನಪು. ಇತ್ತೀಚೆಗೆ ಒಮ್ಮೆ ಬಂಜಗೆರೆ ಫೋನ್ ಮಾಡಿ ‘ನಾನು ಆಗ ಬರೆದಿದ್ದ ಲೇಖನವೇ ಸಿಗಲಿಲ್ಲ. ಸಂಕ್ರಮಣದ ಯಾವ ಸಂಚಿಕೆಯಲ್ಲಿ ಬಂತು ಸಾರ್’ ಎಂದು ವಿಚಾರಿಸಿಕೊಂಡರು.
ಕನ್ನಡ ರಾಷ್ಟ್ರೀಯತೆ ಬಂಜಗೆರೆ ಜಯಪ್ರಕಾಶರವರಿಗೆ ಡಿ.ಲಿಟ್ ತಂದುಕೊಟ್ಟ ಮಹಾ ಪ್ರಬಂಧ. ಇದು 2000ದಲ್ಲಿ ಪ್ರಕಟವಾಯಿತು. ಸಾಕಿಯವರ ಮೇಕಿಂಗ್ ಹಿಸ್ಟರಿ ಮಾದರಿಯಲ್ಲಿ ಕರ್ನಾಟಕದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಬೇರುಗಳನ್ನು ಇದು ರಾಜಕೀಯಾರ್ಥಿಕ ನೆಲೆಯಲ್ಲಿ ಅಧ್ಯಯನ ಮಾಡಿರುವ ಸಂಪ್ರಬಂಧ. ಇನ್ನು ರಾಜ್ಯಮಟ್ಟದಲ್ಲಿ ವಿವಾದ ಎಬ್ಬಿಸಿ ವೀರಶೈವರ ಒತ್ತಾಯಕ್ಕೆ ಮಣಿದು ಸರ್ಕಾರದಿಂದ ಬಹಿಷ್ಕಾರಕ್ಕೆ ತುತ್ತಾದ ಇವರ “ಆನುದೇವಾ ಹೊರಗಣವನು” ಎಂಬ ಸಂಶೋಧನೆಯ ಕಿರುಹೊತ್ತಿಗೆಯ ಬಗ್ಗೆ ಇಲ್ಲಿ ಹೆಚ್ಚಿಗೆ ಹೇಳತಕ್ಕದ್ದು ಏನೂ ಇಲ್ಲ. ಬುದ್ಧ, ಬಸವ ಮುಂತಾದ ವ್ಯಕ್ತಿಗಳು ಯಾವ ಜಾತಿ ಕೊಟ್ಟಿಗೆಯಲ್ಲೂ ನಿರ್ಬಂಧಿಸಿ ಕಟ್ಟುವಂತಹ ಆನೆಗಳಲ್ಲ; ಅವರು ಜಾತ್ಯತೀತರು. ‘ಬಸವಣ್ಣ ಮಾದಿಗ ಜನಾಂಗದಲ್ಲಿ ಜನಿಸಿರಬಹುದೇ ಎಂದು ಅವರ ‘ಮಾದಾರ ಚೆನ್ನಯ್ಯನ ಮಗ ನಾನು’ ಎಂಬ ವಚನದ ಒಂದು ಎಳೆ ಹಿಡಿದು ಹೊರಟ ಜೇಪಿ ತನ್ನ ಅನುಮಾನಿತ ಸತ್ಯವನ್ನು ಮುಂದಿಟ್ಟು ಜಾತಿ ಪ್ರತಿಷ್ಠೆಯಿಂದ ಬೀಗುತ್ತಿದ್ದ ವೀರಶೈವರ ಮೇಲೆ ಚಾಟಿ ಬೀಸಿದ್ದಂತೂ ಅವರ ಧೈರ್ಯ ಧೈರ್ಯದ ಸಂಕೇತ. ಹಾಗೇ ಅಂಬೇಡ್ಕರ್ ಅವರೊಬ್ಬರನ್ನೇ ನಮಿಸಿ ಅಪ್ಪಿ ಆಲಂಗಿಸುತ್ತಿದ್ದ ದಲಿತರ ಕೇರಿಗುಂಟಾ ಬಸವಣ್ಣನನ್ನು ಕರೆತಂದು ‘ಇವ ನಿಮ್ಮವ ಇವ ನಿಮ್ಮವ’ ಎಂದು ಒಪ್ಪಿಸಿದ್ದು ಜೇಪಿಯ ಇನ್ನೊಂದು ಮಹತ್ಸಾಧನೆ. ಮತ್ತೂ ಹೇಳಬೇಕೆಂದರೆ
ಪಜಾಪ್ರಭುತ್ವದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಎಷ್ಟರಮಟ್ಟಿಗೆ ಅವಕಾಶವುಂಟು ಎಂಬುದನ್ನು ಒರೆಗೆ ಹಚ್ಚಿ ನೋಡುವುದನ್ನು ಇವರ ‘ಅನುದೇವಾ ಹೊರಗಣವನು’ ಎಂಬ ಕೃತಿ ಕಾರಣವಾದದ್ದು ಇನ್ನೊಂದು ಗಮನಾರ್ಹ ಸಂಗತಿ. ಆದರೂ ನನ್ನಂಥ ಸಾಹಿತ್ಯದ ವಿದ್ಯಾರ್ಥಿಗೆ ಕಾಡುವ ಪ್ರಶ್ನೆ ಏನೆಂದರೆ, ಬಸವಣ್ಣ ತಾನು ಹುಟ್ಟಿದ ಬ್ರಾಹ್ಮಣ ಜಾತಿಯನ್ನು ಅಪವರ್ಗೀಕರಿಸುತ್ತ ವಿನಮ್ರನಾಗಿ ‘ನಾನು ಮಾದಾರ ಚನ್ನಯ್ಯನ ಮಗ’ ಎಂದದ್ದು ರೂಪಕವಲ್ಲವೆ? ಇದನ್ನೇ ವಾಸ್ತವ ಎಂದರೆ ಶ್ರೀರಾಮಚಂದ್ರನು ಆಯೋಧ್ಯೆಯಲ್ಲಿಯೇ ಹುಟ್ಟುದನೆಂದು ಹೇಳುವವರ ಮಾತನ್ನೂ ನಾವು
ನಂಬಬೇಕಲ್ಲವೇ?
ಅನುವಾದಕ
ಅನುವಾದಕನಾಗಿ ಬಂಜಗೆರೆ ಹೆಸರು ಕನ್ನಡ ಸಾಹಿತ್ಯ ಸಂಸ್ಕೃತಿ ಸಂದರ್ಭದಲ್ಲಿ ಹೆಸರಿಸತಕ್ಕದ್ದೇ ಆಗಿದೆ. ಕನ್ನಡ, ತೆಲುಗು ಮತ್ತು ಇಂಗ್ಲಿಷ್‌ನಲ್ಲಿ ಸಾಕಷ್ಟು ಪರಿಶ್ರಮವುಳ್ಳ ಇವರು ಇಂಗ್ಲಿಷ್ ಮತ್ತು ತೆಲುಗಿನಲ್ಲಿ ಬಂದಿರುವ ಅತ್ಯಂತ ವಿರಳ ಶ್ರೇಷ್ಠ ಕೃತಿಗಳನ್ನು ಆಯ್ತು ಕನ್ನಡ ಬಾಂಧವರಿಗೆ ಅನುವಾದಿಸಿಕೊಟ್ಟು ಉಪಕರಿಸಿದ್ದಾರೆ. ತೆಲುಗು ಮೂಲದಿಂದ ಇವರ ಅನುವಾದ ಆರಂಭಗೊಂಡಿರುವುದಕ್ಕೆ ಮುಖ್ಯ ಕಾರಣ ಅಲ್ಲಿ ಹುಟ್ಟಿ ಬಂದ ಕ್ರಾಂತಿಕಾರಿ ಕವಿ ಜನರು. ಕರ್ನಾಟಕ ವಿಮೋಚನಾ ರಂಗದ ಕಾರ್ಯಕರ್ತರ ತರಬೇತಿ ಶಿಬಿರದಲ್ಲಿ ಆ ತೆಲುಗು ಕವಿಗಳ ಕ್ರಾಂತಿಗೀತೆಗಳನ್ನು ಅನುವಾದಿಸಿ ಕೊಟ್ಟವರು ಇವರು. ತೆಲುಗಿನದೇ ಲಯ ಮತ್ತು ರಿದಮನ್ನು ಕನ್ನಡದಲ್ಲಿಯೂ ಉಳಿಸಿಕೊಂಡು ‘ಅವಳ ಉಡಿಗೆ ಇವಳಿಗುಡಿಸಿ ಹಾಡಬಯಸಿದರು. ಹಾಗಾಗಿ ತೆಲುಗು ಮೂಲದ ಕ್ರಾಂತಿಗೀತೆಗಳು ಕನ್ನಡದಲ್ಲಿ ನೈಜವಾಗಿ ಮೂಡಿಬಂದವು.
ಈ ನಿಟ್ಟಿನಲ್ಲಿ ಇವರು ಮೊದಲು ಮಾಡಿದ ಅನುವಾದಿತ ಕೃತಿ ವಸಂತ ಮೇಘ ಘರ್ಜನೆ. ವಿವಿಧ ಭಾರತೀಯ ಕವಿತೆಗಳ ಅನುವಾದ ಹಾಗೂ ಸಂಪಾದನೆ. (1990) ಮತೀಯ ಮೌಡ್ಯ ದೇಶವ್ಯಾಪಿಯಾಗಿ ಹರಡಿ ಸೌಹಾರ್ದದಿಂದ ಬದುಕುತ್ತಿರುವ ಜನರ ಗೋರಿಕಟ್ಟುತ್ತಿರುವಾಗ ‘ಲಾಲ್ ಬನೋ ಗುಲಾಮಿ ಚೋಡೋ ಬೋಲೋ ವಂದೇ ಮಾತರಂ’ ಎಂಬ ತೆಲುಗು ಮೂಲದ ಎನ್ನೆ ಅವರ ನೀಳವಿತೆಯನ್ನು 1991ರಲ್ಲಿ ಕನ್ನಡಕ್ಕೆ ತಂದರು. ‘ಮತ್ತೊಂದು ಪ್ರಸ್ಥಾನ, ಎಂಬ ಶ್ರೀ ಶ್ರೀ ಯವರ ತೆಲುಗು ಕವಿತೆಗಳ ಅನುವಾದ 1991ರಲ್ಲಿ ಬಂದಿತು. ‘ಸಮುದ್ರ ಮತ್ತು ಇತರ ಕವಿತೆಗಳು’ ಎಂಬ ವರವರರಾವ್ ಅವರ ತೆಲುಗು ಕವಿತೆಗಳನ್ನು 1993ರಲ್ಲಿ ಅನುವಾದಿಸಿದರು. ತೀಕ್ಷ್ಯ ವಿಚಾರವಾದಿ ಮಹಿಳಾ ಲೇಖಕಿ ಶ್ರೀಮತಿ ರಂಗನಾಯಕಮ್ಮನವರ ‘ರಾಮಾಯಣ ವಿಷವೃಕ್ಷಮು’ ಎಂಬ ವಾಲ್ಮೀಕಿ ರಾಮಾಯಣದ
ಎಣ
ವಿಶ್ಲೇಷಣಾ ಕೃತಿಯನ್ನು ಜೇಪಿ ‘ಇದೇ ರಾಮಾಯಣ'(1994) ಎಂಬುದಾಗಿ ಸಂಕ್ಷಿಪ್ತಗೊಳಿಸಿ ಕನ್ನಡಕ್ಕೆ ತಂದರು. ಇಂಗ್ಲಿಷಿನಿಂದ ಖಲೀಲ್ ಗಿಬ್ರಾನ್‌ನ ‘ದಿ ಪ್ರೊಫೆಟ್’ಅನ್ನು ‘ಪ್ರವಾದಿ’ (1999) ಎಂದು ಅನುವಾದಿಸಿದರು. ‘ತಲೆಮಾರು’ ಎಂಬುದಾಗಿ ಇಂಗ್ಲಿಷಿನಿಂದ ಅಲೆಕ್ಸ್ ಹೆಲಿಯ ‘ರೂಟ್ಸ್’ ಕಾದಂಬರಿ (2003)ಯನ್ನು ಸಂಗ್ರಹಾನುವಾದ ಮಾಡಿದರು. ಶಂಕರ ಮೊಕಾಶಿ ಪುಣೇಕರ್ ಅವರ ‘ಹರಿಜನ್ ಕಾಂಟ್ರಿಬ್ಯೂಷನ್ ಟು ಮಿಡಿವಲ್ ಇಂಡಿಯನ್ ಥಾಟ್’ ಇಂಗ್ಲಿಷ್ ಕೃತಿಯನ್ನು ‘ಮಧ್ಯ ಯುಗೀನ ಭಾರತ; ಅಂತ್ಯಜರ ತತ್ವ ಚಿಂತನೆ’ (lo12) ಎಂಬುದಾಗಿ ಅನುವಾದಿಸಿದ್ದಾರೆ. ಒಟ್ಟಾರೆ ಜೇಪಿಯವರ ಅನುವಾದಗಳನ್ನು ಲೆಕ್ಕಿಸಿದರೆ ಇವರು ಯಾರ ಪರ? ಬೇಟೆಯ ಪರವೋ ಅಥವಾ ಬೇಟೆಗಾರನ ಪರವೋ ಎಂಬುದು ಯಾರಿಗಾದರೂ ಅರಿವಿಗೆ ಬರುತ್ತದೆ.
ಪುಸ್ತಕ ಪ್ರಾಧಿಕಾರದ ಅಧ್ಯಕ್ಷ
ಪ್ರಸ್ತುತ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿರುವ ಡಾ. ಬಂಜಗೆರೆ ಜಯಪ್ರಕಾಶ್ ಅವರು ಕೈಗೊಂಡಿರುವ ಕ್ರಿಯಾಯೋಜನೆಗಳು ಅವರ ಕಾರ್ಯಕ್ಷಮತ್ವಕ್ಕೂ, ಸಾಂಸ್ಕೃತಿಕ ಒಳನೋಟಕ್ಕೂ ಹಾಗೂ ಅವರ ಪ್ರಜಾಪ್ರಭುತ್ವ ಮೌಲ್ಯ ವರ್ಧನ ಅಭೀಪೈಗೂ ತಕ್ಕುದಾಗಿ ರೂಪುಗೊಂಡಿವೆ. ಅವುಗಳ ವಿವರ ಹೀಗಿದೆ:
ಕ್ರಿಯಾ ಯೋಜನೆಗಳ ವಿವರ
ಇದರಲ್ಲಿ ಮುಖ್ಯವಾಗಿ ಗಮನಿಸಬೇಕಾದ್ದು ‘ದೇಶಿ ದರ್ಶನಮಾಲೆ.’ ಇದುವರೆಗಿನ ಭಾರತೀಯ ವಿದ್ವತ್ ಜಗತ್ತು ವೈದಿಕ ಮೂಲಕ ವೈಶೇಷಿಕ, ನ್ಯಾಯ, ವೇದಾಂತ, ಸಾಂಖ್ಯ, ಯೋಗ ಮತ್ತು ಮೀಮಾಂಸೆ ಎಂಬ ಈ ಷಡ್ಡರ್ಶನಗಳೇ ಯುಗಯಾತ್ರೀ ಭಾರತೀಯ ಸಂಸ್ಕೃತಿ ತಿರುಳು ಎಂಬುದಾಗಿ ವೈಭವೀಕರಿಸಿ ಬಿಂಬಿಸಲಾಗುತ್ತಿತ್ತು. ಆದರೆ ಇದಕ್ಕೆ ಸಮಾನಾಂತರವಾಗಿ ಆರ್ಯಪೂರ್ವ ಕಾಲದಿಂದಲೂ ಕೆಲವು ದೇಶಿ ದರ್ಶನಗಳು ಜನರ ನಡುವೆ ಇದ್ದುವು. ಶಾಕ್ಯ ಮೂಲದ ಇವುಗಳಲ್ಲಿ ಮುಖ್ಯವಾದ ಕೆಲವು ಇಂತಿವೆ ಶೈವ, ಕಾಪಾಲಿಕ, ಕಾಳಾಮುಖ, ಚಾರ್ವಾಕ, ಪಾಶುಪತ ಮತ್ತು ಅಘೋರಿ ಮುಂತಾಗಿ, ಇವುಗಳನ್ನು ತಾಂತ್ರಿಕ ಯೋಗದ ದರ್ಶನಗಳೆಂದೂ ಕರೆಯಲಾಗಿದೆ. ಇವುಗಳಲ್ಲಿ ಕೆಲವು ಮೂಲೆ ಗುಂಪಾಗಿವೆ. ಇನ್ನು ಕೆಲವುಗಳ ಸಾರವನ್ನು ವೈದಿಕ ದರ್ಶನಗಳೇ ಹೀರಿ ಬೆಳೆದಿವೆ. ಆದ್ದರಿಂದ ಇಂಥ ಸಾಂಸ್ಕೃತಿಕ ರಾಜಕಾರಣದ ಬಗ್ಗೆ ಎಚ್ಚರ ಹೇಳಿ ಇರಬೇಕೆಂಬುದು ಜೇಪಿ ಆಶಯ. ಅವೈದಿಕ ದರ್ಶನಗಳ ಬಗ್ಗೆ
ಸಮಾನ್ಯ ಓದುಗರಿಗೂ ತಿಳಿದುಬರುವಂತೆ ಮಾಡಲು ಪುಸ್ತಕ ಪ್ರಾಧಿಕಾರವು ಇಂಥ ಇದ್ದುವೆಂದು ತಿಳಿದುಬಂದಿದೆ. ಈ ಬಗ್ಗೆ ಸಂಶೋಧನೆಯಾಗಬೇಕಾಗಿದೆ. ಈ ಚಾರ್ವಾಕ, ಪಾಶುಪತ ಮತ್ತು ಅಘೋರಿಗಳ ನೆಲೆದಾಣಗಳು ಕರ್ನಾಟಕದಲ್ಲಿ ಅಲ್ಲಲ್ಲಿ ಒಂದು ಕ್ರಿಯಾ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಕಾಪಾಲಿಕ, ಕಾಳಾಮುಖ, ಸಂಬಂಧವಾಗಿ ಚಿಕ್ಕ ಚಿಕ್ಕ ಪುಸ್ತಕಗಳನ್ನು ಸೂಕ್ತ ವಿದ್ವಾಂಸರಿಂದ ಬರೆಸಿ ಪ್ರಕಟಿಸಬೇಕೆಂ ಉತ್ಸುಕತೆ ಜೇಪಿ ಅವರದು. ಹೀಗೆ ಅವರ ಎಲ್ಲ ಯೋಜನೆಗಳೂ
ಜನಮುಖಿಯಾಗಿರುವಂತೆ ಕಂಡುಬರುತ್ತಿವೆ.
ನಮ್ಮ ವ್ಯಕ್ತಿತ್ವ
ಬಂಜಗೆರೆ ಜಯಪ್ರಕಾಶ್ ಅವರದು ಜನಾನುರಾಗಿ ನಮ್ಮ ವ್ಯಕ್ತಿತ್ವ, ಅವರು ತನಗೆ ಬೇಕಾಗಿ, ಅವರಿಗೆ ತಾನು ಬೇಕಾದವನಾಗಿ ಬದುಕಬೇಕೆಂಬ ಬಯಕೆ ಅವರದು. ಅವರ ಓಡಾಟಕ್ಕೆ ಗಡಿ ಸೀಮೆಗಳಿಲ್ಲ. ನಿನ್ನ ಸೇವೆಗೆ ಸಮಯಾಸಮಯ ಉಂಟೇ ಹರಿಯೆ’ ಎಂಬಂತೆ ಕರೆದಲ್ಲಿಗೆ ಹೋಗಿ ದಣಿವರಿಯದೆ ಭಾಷಣ ಮಾಡಿ, ಕಡೆಗೆ ಕೊಂಚ ಬಿಯರ್ ಕುಡಿದು ಮಾತಾಡಬಲ್ಲರು. ಹಾಗೆಂದು ಅವರ ಮಾತು ಕಾಡುಹರಟೆಯಲ್ಲ. ‘ಅಳಿದೊಡಮ್ ಉಳಿದೊಡಮ್ ಯುವಜನಕ್ಕೆ ಬಟ್ಟೆ(ದಾರಿ) ತೋರುವ ಮಾತು. ‘ತಾಯಿ ಕೋಳಿ’ಯಂತೆ ಅವರ ಬೆನ್ನು ತಟ್ಟಿ, ಅವರ ತೊದಲು ನುಡಿಯನ್ನೇ ಮೆಚ್ಚಿಕೊಂಡು ‘ಮುಂದೆ ಇನ್ನೂ ಚೆನ್ನಾಗಿ ಬರೆಯಿರಿ’ ಎಂದು ಪ್ರೋತ್ಸಾಹಿಸುತ್ತಾರೆ. ಕಳೆದ ಹತ್ತಾರು ವರ್ಷಗಳಲ್ಲಿ ಅವರ ಹಿನ್ನುಡಿ, ಮುನ್ನುಡಿ, ಬೆನ್ನುಡಿಗಳಿಲ್ಲದ ಯುವ ಕವಿ, ಕಥೆಗಾರರ ಪುಸ್ತಕಗಳೇ ಅಪರೂಪ. ‘ಹೀಗೇಕೆ ನುಗ್ಗೆ ಮರ ಹತ್ತಿಸುತ್ತೀರಿ?’ಎಂದು ಯಾರಾದರೂ ಕೇಳಿದರೆ ‘ಛೇ! ಹಾಗೆಲ್ಲ ಮುಖ ಮುರಿಯುವುದು ಸರಿಯೇ?’ಎಂಬುದು ಅವರ ಮರು ಪ್ರಶ್ನೆ.
ಜೇಪಿ ಸಾಂಗತ್ಯದಲ್ಲಿ ಗುರು ಶಿಷ್ಯ ಸಂಬಂಧಕ್ಕೆ ಉಲ್ಟಾ ಅರ್ಥ. ನಾನು ಒಮ್ಮೊಮ್ಮೆ ಯಾರಿಗಾದರೂ ‘ಜೇಪಿ ಮೈ ಆಕ್ಟಿವಿಸ್ಟ್ ಗುರು’ ಎಂದು ಪರಿಚಯಿಸುತ್ತೇನೆ, ಅದಕ್ಕೆ ಅವರು ಅವೈದಿಕ ನಾಥಪಂಥ ಮುಂತಾದವುಗಳಲ್ಲಿ ಗುರುಶಿಷ್ಯ ಭೇದವಿಲ್ಲ. ಹಾಗೇ ಪ್ರೊಫೆಸರ್ ಶಿವರಾಮಯ್ಯನವರು ನನ್ನನ್ನು ಗುರು ಎಂದು ಕರೆಯುತ್ತಿರಬಹುದು ಎಂದು ನಗೆ ಚೆಲ್ಲುತ್ತಾರೆ. ನಾನಿನ್ನು ನಿಲ್ಲಿಸುತ್ತೇನೆ-ಬಹಳ ಆಯ್ತಲ್ಲ!
ಚಳವಳಿಗಳ
ಸಂಗಾತಿ