Gandhakuti

ಬಾಗ್ ಬಹಾದುರನ ಸಾವು ಕೃತಿಯು ಬಂಜಗೆರೆ ಜಯಪ್ರಕಾಶರವರು ತಮ್ಮ ಒಡನಾಟಗಳ ನೆನಪುಗಳು, ಪುಸ್ತಕಗಳ ಓದು ಹಾಗೂ ವರ್ತಮಾನಕ್ಕೆ ಸ್ಪಂದಿಸಿದ ಆಲೋಚನೆಗಳ ಬರಹಗಳನ್ನು ಒಳಗೊಂಡಿರುವ ಸಂಸ್ಕೃತಿ ಚಿಂತನೆಗಳ ಕಟ್ಟು.

ಈ ಬರಹಗಳು ಸರಿ ಸುಮಾರು ಒಂದು ದಶಕದ ಅವಧಿಯಲ್ಲಿ ರೂಪುತಳೆದಿದ್ದು  ಬೇರೆ ಬೇರೆ ಪತ್ರಿಕೆಗಳಲ್ಲಿ  ಓದುಗರಿಗೆ ಭಾರವೆನಿಸದ ಹಾಗೆ ನಿರೂಪಿತವಾಗಿರುವ ಅಂಕಣ ಬರಹಗಳಾಗಿದ್ದು,  ‘ಸಾಹಿತ್ಯ ಸಂಘರ್ಷ’ ನಿಯತಕಾಲಿಕೆ, ‘ಈ ವಾರ-ಕರ್ನಾಟಕ’ ಪತ್ರಿಕೆ, ‘ಅಗ್ನಿ’ ವಾರ ಪತ್ರಿಕೆ ಹಾಗೂ ‘ಸಾಹಿತ್ಯ ಅಕಾಡೆಮಿಯ  ವಾರ್ಷಿಕ ಸಂಕಲ’ನಗಳಲ್ಲಿ ಪ್ರಕಟಗೊಂಡವುಗಳಾಗಿವೆ.

ತಾವು ನೋಡಿದ ಸಿನಿಮಾ ಕಥೆಯಲ್ಲಿ ಬರುವ ಬಾಗ್ ಬಹಾದ್ದೂರ್  ಎನ್ನುವ ಹುಲಿವೇಷದ  ಕಲಾವಿದನ ದಾರುಣ ಬದುಕಿನಿಂದ ಹಿಡಿದು ಪತ್ರಕರ್ತ ರವಿ ಬೆಳೆಗೆರೆಯವರ ಪತ್ರಿಕೆಯ  ಸಾಮಾಜಿಕ ಪರಿಣಾಮದ ವರೆಗೂ ಇಲ್ಲಿನ ಲೇಖನಗಳ ಹರವು ಇದೆ. ಇಲ್ಲಿನ ಲೇಖನಗಳು  ಪತ್ರಿಕೆಗಳ ಅಂಕಣ ಬರಹಗಳಾದರೂ ಭಾಷೆ ಮತ್ತು ಅವು ಓದುಗರಲ್ಲಿ ಉಂಟುಮಾಡುವ ಪರಿಣಾಮಗಳ ದೃಷ್ಟಿಯಲ್ಲಿ ಇದೊಂದು ಸಾಮಾಜಿಕ ಕಾವ್ಯವಾಗಿದೆ. ಅಂಬೇಡ್ಕರ್ ಮತು ಮಾರ್ಕ್ಸ್ ವಾದಿಗಳಿಂದ  ಹೆಚ್ಚು ಪ್ರಭಾವಿತವಾದ ಜೆಪಿ ಈ ಲೇಖನಗಳ ಮೂಲಕ  ಮೂಲಕ ಕನ್ನಡ ವಿಚಾರ ಲೋಕದ  ಮಾದರಿಗಳ  ಹುಡುಕಾಟ  ನಡೆಸಿದ್ದಾರೆ. 

ಬಾಗ್ ಬಹಾದುರ್ ನ ಸಾವು