ಆಂಗ್ಲ ಲೇಖಕ ವೆಂಡಿ ಡೊನಿಗಲ್ ಅವರ ‘ದ ಹಿಂದೂಸ್: ಯಾನ್ ಆಲ್ಟರ್ನೇಟಿವ್ ಹಿಸ್ಟರಿ’ ಕೃತಿಯನ್ನು ಲೇಖಕ ಬಂಜಗೆರೆ ಜಯಪ್ರಕಾಶ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ-ಹಿಂದೂಗಳು…ಬೇರೊಂದು ಚರಿತ್ರೆ. ಯಾವುದೇ ದೇಶದ ಧರ್ಮದ ಚರಿತ್ರೆಯನ್ನು ಅಪೂರ್ಣವಾಗಿ ಹೇಳುವುದು, ದುರ್ಬಳಕೆ ಮಾಡಿಕೊಳ್ಳುವುದು ಸಲ್ಲದು. ವಿವಿಧ ಧರ್ಮಗಳ ಚೌಕಟ್ಟುಗಳಡಿ ಮೂಲ ಲೇಖಕರು ಚಿಂತನೆ ನಡೆಸಿದ್ದು, ಹಿಂದೂ ಧರ್ಮವು ಒಂದು ಧರ್ಮ ಎಂದು ಹೇಳಲಾಗದು. ಧರ್ಮದ ವ್ಯಾಖ್ಯಾನದಡಿ ಹಿಂದೂವನ್ನು ಸೇರಿಸಲಾಗದು ಎಂದು ಚರ್ಚಿಸುತ್ತಾರೆ. ಬೇರೆ ಭೇರೆ ಧರ್ಮದಲ್ಲಿರುವ ವೈಶಿಷ್ಟ್ಯಗಳನ್ನು ಎತ್ತಿ ತೋರಿಸಿ, ಮೂಲ ವ್ಯಾಖ್ಯಾನಿಸುವಲ್ಲೇ ಹಿಂದೂ ಧರ್ಮವು ಮೂಲ ಗುಣ- ಲಕ್ಷಣಗಳನ್ನು ಕಳೆದುಕೊಳ್ಳುತ್ತದೆ ಎಂದು ಗುರುತಿಸುತ್ತಾರೆ. ಇಂತಹ ವಿಷಯ-ಸಂಗತಿಗಳಿರುವ ಕೃತಿಯನ್ನು ಲೇಖಕರು ಸಮರ್ಥವಾಗಿ ಅನುವಾದಿಸಿದ್ದಾರೆ.