2008 ರ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ ‘ಪಾಪ ನಿವೇದನೆ’. ವಿಶ್ವಬ್ಯಾಂಕ್ ಅಂತಾರಾಷ್ಟ್ರೀಯ ಅಭಿವೃದ್ಧಿ ಏಜನ್ಸಿ ಹಾಗೂ ಇತರೆ ವಿದೇಶಿ ಲೇವಾದೇವಿ ಸಂಸ್ಥೆಗಳಿಂದ ಸಾವಿರಾರು ಕೋಟಿ ಡಾಳರ್ ಗಳನ್ನು ಅಕ್ರಮ ಮಾರ್ಗದಲ್ಲಿ ಕೆಲವು ಬಹುರಾಷ್ಟ್ರೀಯ ಕಂಪನಿಗಳಿಗೆ, ಕೆಲವು ಶ್ರೀಮಂತರ ಕೈಸೇರುವಂತೆ ಮಾಡುವ ಎಕನಾಮಿಕ್ ಹಿಟ್ ಗಳ ಕತೆ. 60-70 ರ ದಶಕಗಳಲ್ಲಿ ಒಬ್ಬ ಎಕನಾಮಿಕ್ ಹಿಟ್ ಮನ್ ಆಗಿ ಕೆಲಸ ಮಾಡಿದ ಜಾನ್ ಪೆರ್ಕಿನ್ಸ್ ಬರೆದ ‘Confessions of an Economic Hitman’ ಕೃತಿಯನ್ನು ಕನ್ನಡ ಹಾಗೂ ಭಾರತೀಯ ಸಮಾಜಗಳ ವರ್ತಮಾನದ ರಾಜಕೀಯಾರ್ಥಿಕ ವಿದ್ಯಮಾನಗಳನ್ನು ಅರಿಯಲು ವಿಶಿಷ್ಟ ಒಳನೋಟಗಳನ್ನು ಈ ಕೃತಿ ಒದಗಿಸುತ್ತದೆ.
ಪಾಪ ನಿವೇದನೆ