ಕವಿ, ಸಂಸ್ಕೃತಿ ಚಿಂತಕ, ವಿಮರ್ಶಕ, ಅಂಕಣಕಾರ, ಅನುವಾದಕ ಮತ್ತು ಜನಪರ ಹೋರಾಟಗಾರರಾಗಿರುವ ಬಂಜಗೆರೆ ಜಯಪ್ರಕಾಶ್ ಹುಟ್ಟಿದ್ದು ಜೂನ್ ೧೭ ೧೯೬೫ರಲ್ಲಿ, ಹಿಂದುಳಿದ ಬುಡಕಟ್ಟು ಜಾತಿಯ ರೈತಾಪಿ ಕುಟುಂಬದ ಹಿನ್ನೆಲೆ, ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲ್ಲೂಕಿನ ಬಂಜಗೆರೆ ಸ್ವಂತ ಊರು,
ಚಳ್ಳಕೆರೆ ಚಿತ್ರದುರ್ಗಗಳಲ್ಲಿ ಪಿಯುಸಿವರೆಗೆ ವಿದ್ಯಾಭ್ಯಾಸ. ೧೯೮೫ರಲ್ಲಿ ಮೈಸೂರು ಮಹಾರಾಜ ಕಾಲೇಜಿನಿಂದ ಪತ್ರಿಕೋದ್ಯಮ ಪದವಿ. ೧೯೮೭ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎಸ್.ಡಬ್ಲ್ಯು ಪದವಿ. ಕನ್ನಡ ವಿಶ್ವವಿದ್ಯಾಲಯದಿಂದ ೧೯೯೯ರಲ್ಲಿ ಡಾಕ್ಟರ್ ಆಫ್ ಲಿಟರೇಚ (ಡಿ.ಲಿಟ್) ಪದವಿ. ಕಳೆದ ಎರಡು ದಶಕಗಳಿಂದ ಜನಪರ ಚಳುವಳಿಗಳಲ್ಲಿ ಸಕ್ರಿಯ ಪಾತ್ರ, ಕನ್ನಡ ವಿಶ್ವವಿದ್ಯಾಲಯವು ಆರಂಭಿಸಿರುವ ದೇಸಿ ಸಂಸ್ಕೃತಿ ಅಧ್ಯಯನ ಕೇಂದ್ರದ ಅಧ್ಯಯನ ಮಂಡಲಿ ಸದಸ್ಯರಾಗಿ, ೨೦೦೫ರಿಂದ ೨೦೦೮ರವರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಕಾರ್ಯನಿರ್ವಹಣೆ. ಇವರ ಇಂಗ್ಲಿಶ್ ಅನುವಾದಿತ ಕೃತಿ ‘ಪಾಪ ನಿವೇದನೆ’ಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ೨೦೦೮ರ ಪುಸ್ತಕ ಪ್ರಶಸ್ತಿ ಬಂದಿದೆ. ಹೊನ್ನಾರು ಸಾಹಿತ್ಯ ಮಾಸ ಪತ್ರಿಕೆಯ ಗೌರವ ಸಂಪಾದಕ, ಹಲವಾರು ಪತ್ರಿಕೆಗಳ ಅಂಕಣ ಬರಹಗಾರ.
ಪ್ರಸ್ತುತ ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕು ಹಾರೋಹಳ್ಳಿಯಲ್ಲಿ ನೆಲೆಸಿರುವ ಇವರು ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಆದಿಮ ಬುಡಕಟ್ಟು ಸಮುದಾಯಗಳ ಅಧ್ಯಯನ ಯೋಜನೆ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕವನ ಸಂಕಲನಗಳು:
೧) ಪದಾರ್ಪಣ (೧೯೮೩),
೨) ಮಹೂವಾ (೧೯೯೨),
೩) ನಾಳೆಗಾದರೂ ಸಿಗದೆ ನಿನ್ನ ತಾವಿನ ಗುರುತು (೧೯೯೮),
೪) ಕಳೆದ ಕಾಲದ ಪ್ರೇಯಸಿಯರಿಗೆ (ಸಂಯುಕ್ತ ಸಂಕಲನ-೨೦೦೧)
ಲೇಖನ ಸಂಗ್ರಹ:
೫) ಬಾಗ್ ಬಹಾದುರ್‌ನ ಸಾವು (೨೦೦೩),
೬) ಉಲಿಯ ಉಯ್ಯಲೆ (೨೦೦೫),
೭) ನಿಲ-ವರ್ತಮಾನ ಮುಖಾಬಿಲೆ (ಲೇಖನಗಳು)-೨೦೦೯,
೮) ಪಿಳ್ಳಂಗೋವಿ (ಲೇಖನಗಳು ಮತ್ತು ಮುನ್ನುಡಿಗಳು)-೨೦೦೯
ಸಂಸ್ಕೃತಿ ಅಧ್ಯಯನ:
೬) ಇದೇ ರಾಮಾಯಣ (ವಾಲ್ಮೀಕಿ ರಾಮಾಯಣದ ಸಾಂಸ್ಕೃತಿಕ ವಿಶ್ಲೇಷಣೆ)-೧೯೯೪
೧೦) ಕನ್ನಡ ರಾಷ್ಟ್ರೀಯತೆ (ಸಾಮಾಜಿಕ ಹಾಗೂ ಸಾಂಸ್ಕೃತಿಕ ಬೇರುಗಳ ರಾಜಕೀಯಾರ್ಥಿಕ ಅಧ್ಯಯನ): ಡಿ.ಲಿಟ್ ಮಹಾಪ್ರಬಂಧ-೨೦೦೦
೧೧) ಕರ್ನಾಟಕತ್ವ-ಸಮಾಜೋ ಆರ್ಥಿಕ ತಳಹದಿ-೨೦೦೬
೧೨) ಆನು ದೇವಾ ಹೊರಗಣವನು (ಬಸವಣ್ಣನ ಜಾತಿ ಮೂಲದ ವಿಶ್ಲೇಷಣೆ) ಕರ್ನಾಟಕ ಸರ್ಕಾರದಿಂದ ಮುಟ್ಟುಗೋಲಿಗೆ ಒಳಗಾದ ವಿವಾದಿತ ಕೃತಿ-೨೦೦೭
ಅನುವಾದಗಳು:
೧೩) ವಸಂತ ಮೇಘ ಘರ್ಜನೆ (ವಿವಿಧ ಭಾರತೀಯ ಕ್ರಾಂತಿಕಾರಿ ಕವಿತೆಗಳು)-೧೯೯೦
೧೪) ಲಾಲ್ ಬನೋ ಗುಲಾಮಿ ಛೋಡೋ ಬೋಲೋ ವಂದೇ ಮಾತರಂ (ಎನೈಯವರ ತೆಲುಗು ಖಂಡಕಾವ್ಯ)-೧೯೯೧,
೧೫) ಮತ್ತೊಂದು ಪ್ರಸ್ಥಾನ (ಶ್ರೀ ಶ್ರೀ ತೆಲುಗು ಕವಿತೆಗಳು)-೧೯೯೧
೧೬) ಸಮುದ್ರ ಮತ್ತು ಇತರ ಕವಿತೆಗಳು (ವರವರರಾವ್ ಆಯ್ದ ತೆಲುಗು ಕವಿತೆಗಳು)-೧೯೯೫
೧೭) ಅಗೆತವಿಲ್ಲದ ತೋಟಗಾರಿಕೆ (ಸಹಜ ತೋಟಗಾರಿಕೆಯಲ್ಲೊಂದು ಪ್ರಯೋಗ-ಎ, ಗೆಸ್ಟ್ ಇಂಗ್ಲಿಷ್ ಕೃತಿ)-೧೯೯೬
೧೮) ಪ್ರವಾದಿ (ಖಲೀಲ್ ಗಿಬ್ರಾನ್ ‘ದಿ ಪ್ರೊಫೆಟ್’ ಇಂಗ್ಲಿಷ್ ಕೃತಿ)-೧೯೯೯
೧೯) ತಲೆಮಾರು (ಅಲೆಕ್ಸ್ ಹೆಲಿ ‘ದಿ ರೂಟ್ಸ್’ ಇಂಗ್ಲಿಷ್)-೨೦೦೩
೨೦) ಜಾತಿ-ರಾಷ್ಟ್ರದೊಳಗೊಂದು ರಾಷ್ಟ್ರ (ವಿ.ಟಿ. ರಾಜಶೇಖ ಇಂಗ್ಲಿಷ್ ಕೃತಿ)-೩೦೦೫
೨೧) ದೇಗುಲದಲ್ಲಿ ದೆವ್ವ (ಗೂಗಿ ವಾ ಥಿಯಾಂಗೊ ಅವರ ‘ಡೆವಿಲ್ ಆನ್ ದ ಕ್ರಾಸ್’ ಇಂಗ್ಲಿಷ್ ಕಾದಂಬರಿ)-೨೦೦೭
೨೨) ಪಾಪ ನಿವೇದನೆ (ಜಾನ್ ಪೆರ್ಕಿನ್ಸ್ ‘ಕನ್ಶನ್ಸ್ ಆಫ್ ಆನ್ ಎಕನಾಮಿಕ್ ಹಿಟನ್’ ಇಂಗ್ಲಿಷ್ ಕೃತಿ)-೨೦೦೮
೨೩) ಮಧ್ಯಯುಗೀನ ಭಾರತ-ಅಂತ್ಯಜರ ತತ್ವ ಚಿಂತನೆ-(ಶಂಕರ ಮೊಕಾಶಿ ಪುಣೇಕ ‘Harijan Contribution to Medeaval Indian Thought’-2011)