ಬಂಜಗೆರೆ ಜಯಪ್ರಕಾಶ್ ಅವರ “ಮಹೂವಾ” ಮತ್ತು “ನಾಳೆಗಾದರೂ ಸಿಗದೆ ನಿನ್ನ ತಾವಿನ ಗುರುತು” ಕವನ ಸಂಕಲನಗಳ ಕವಿತೆಗಳು ಮತ್ತು ನಂತರ ಬರೆದ ಆಯ್ದ ಕವಿತೆಗಳನ್ನು ಒಟ್ಟುಮಾಡಿ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಶತಮಾನೋತ್ಸವದ ಮಾಲಿಕೆಯಲ್ಲಿ ಪ್ರಕಟಿಸಿರುವ ಕವನ ಸಂಕಲನ “ಬಂಜಗೆರೆ – ಈವರೆಗಿನ ಕವಿತೆಗಳು”. ‘ನನ್ನ ಅಕಾವ್ಯಕ್ಕೆ ಅರ್ಥ ಗೊತ್ತಿಲ್ಲ ನನಗೆ, ಗೊತ್ತಿರೋದು ಕಾರಣ’ ಎಂದು ಕಾಲದ ಪ್ರತಿಧ್ವನಿಗಳಾಗಿ, ಪ್ರತಿರೋಧಗಳಾಗಿ, ಸಾಕ್ಷಿಪ್ರಜ್ಞೆಯಾಗಿ ಓದುಗ ಲೋಕವನ್ನು ಎಚ್ಚರಿಸುತ್ತವೆ.
ಬಂಜಗೆರೆ : ಈವರೆಗಿನ ಕವಿತೆಗಳು