“ಪದಾರ್ಪಣ” ಬಂಜಗೆರೆ ಜಯಪ್ರಕಾಶ್ ಅವರ ಮೊದಲ ಕವನ ಸಂಕಲನ. ಅವರು ವಿದ್ಯಾರ್ಥಿ ದೆಸೆಯಲ್ಲಿ ರಚಿಸಿದ ಕವನಗಳ ಈ ಕಟ್ಟು 1983ರಲ್ಲಿ ಲೋಕಾರ್ಪಣೆ ಕಂಡಿದೆ. ಇಲ್ಲಿನ ಕವಿತೆಗಳು ಅಭಿವ್ಯಕ್ತಿಯಲ್ಲಿ ನೂತನತೆ ಮಾತ್ರವಲ್ಲದೆ ಲೋಕವನ್ನು ನೋಡುವ ಕಣ್ಣೋವನ್ನು ಬದಲಿಸುವ ಗುಣವನ್ನು ಹೊಂದಿವೆ. ಸಮಾಜದ ಹೊರಮೈಯನ್ನು ಮಾತ್ರ ಕಾಣಿಸುವ ಕಾವ್ಯಾಭಿವ್ಯಕ್ತಿಯ ಮಿತಿಗಳನ್ನು ತಮ್ಮ ಮೊದಲ ಕವನ ಸಂಕಲನದಲ್ಲಿಯೇ ಮೀರುವ ಕವಿತೆಗಳನ್ನು ಜೇಪಿಯವರು ಕನ್ನಡ ಕಾವ್ಯ ಪರಂಪರೆಗೆ ಸೇರಿಸಿದ್ದಾರೆ.
ಪದಾರ್ಪಣ