“ನಾಳೆಗಾದರೂ ಸಿಗದೆ ನಿನ್ನ ತಾವಿನ ಗುರುತು” 1998ರಲ್ಲಿ ಪ್ರಕಟವಾದ ಎರಡನೆಯ ಕವನ ಸಂಕಲನ. ʼನಾಳೆಗಾದರೂ ಸಿಗದೆ ನಿನ್ನ ತಾವಿನ ಗುರುತುʼ ಸಂಕಲನದಲ್ಲಿ ಒಟ್ಟು 19 ಕವಿತೆಗಳಿವೆ. ಕವಿಯನ್ನು ಆವರಿಸಿಕೊಂಡ ಕಾವಯವಸ್ತು ಓದುಗ ಜಗತ್ತನ್ನೂ ಆತ್ಮೀಯವಾಗಿ ಆವರಿಸಿಕೊಂಡು ಕಾಡುತ್ತವೆ. ಕಾಡಿನ ಲೋಕದಿಂದ, ಪುರಾಣ ಲೋಕದಿಂದ ಮತ್ತು ಕಣ್ಣಮುಂದಿನ ಲೋಕಾನುಭವಗಳಿಂದ ಸಾಣೆಗೊಂಡ ಜೆಪಿ ಕಾವ್ಯಲೋಕ ಕನ್ನಡದ ಬರಹಗಾರರಿಗೆ ಅನುಭವ ಮತ್ತು ಜನಸಾಮಾನ್ಯರ ತತ್ವಲೋಕಗಳ ಮಾದರಿಗಳನ್ನು ತರೆದಿಡುತ್ತದೆ. ಅಗೋಚರಗಳಲ್ಲಿ ಮುಳುಗದೆ ಕಣ್ಣಮುಂದಿನ ಜಗತ್ತಿನೊಡನೆ ಸಂವಾದ ಬಯಸುವ ಈ ಕವಿತೆಗಳು ಕನ್ನಡದ ಅನನ್ಯತೆಗೆ ಸಾಕ್ಷಿಯಾಗಿವೆ.
ನಾಳೆಗಾದರು ಸಿಗದೆ ನಿನ್ನ ತಾವಿನ ಗುರುತು