Skip to main content

Gandhakuti

  ʼನಿಲʼ  – ಜೆ.ಪಿ. ಯವರು ಹಲವು ವರ್ತಮಾನದ ಸಂಗತಿಗಳನ್ನು ಕುರಿತಂತೆ ಬೇರೆ ಬೇರೆ ಪತ್ರಿಕೆಗಳಿಗೆ ಬರೆದ ಲೇಖನಗಳ ಸಂಕಲನ. ಈ ಕೃತಿಯ ಶೀರ್ಷಿಕೆಯೇ ತುಂಬಾ ರೂಪಕಾತ್ಮವಾಗಿದೆ.  ಹಿಂದೆ ನಮ್ಮ ಹಳ್ಳಿಗಳಲ್ಲಿ ಪ್ರತಿಯೊಂದು ಮನೆಗಳಲ್ಲಿಯೂ ನಿಲಗಳಿರುತ್ತಿದ್ದವು. ನಿಲವೆಂದರೆ, ಮನೆಗಳ ಪಡಸಾಲೆ, ನಡುಪಟ್ಟೆ, ಕೋಣೆ, ಜಂತೆ, ಮೊದಲಾದೆಡೆಗಳಲ್ಲಿ ಕಡೆದ ಬೆಣ್ಣೆ, ಕಾಯಿಸಿದ ಕೆನೆ, ಹಾಲು, ಮಜ್ಜಿಗೆ, ತಿನಿಸುಗಳು ಇತ್ಯಾದಿಗಳನ್ನು ಮಡಿಕೆಗಳಲ್ಲಿ ತುಂಬಿಸಿ, ಅವುಗಳನ್ನು ಜೋಪಾನವಾಗಿ ರಕ್ಷಿಸುವ ಉದ್ದೇಶದಿಂದ ಮೇಲೆ ಕಟ್ಟಲಾಗುತ್ತಿತ್ತು. ನಿಲವು ಅಮೂಲ್ಯವಾದ ಅಗತ್ಯ ವಸ್ತುಗಳ ಸಂಗ್ರಹವೇ ಆಗಿರುತ್ತಿತ್ತು. 

ಹೀಗೆ ʼನಿಲʼ ನಮ್ಮ ನಡುವಿನ ವರ್ತಮಾನದ ಹಲವು ಸಂಗತಿಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಇಲ್ಲಿನ ಎಲ್ಲಾ ಲೇಖನಗಳು ಪೂರ್ವಾಗ್ರಹ ಪೀಡಿತರ ಆಲೋಚನೆಗಳನ್ನು ಪ್ರಶ್ನಿಸುತ್ತಲೇ ಮುಂದುವರೆಯುತ್ತವೆ. ಹೊಸ ಹೊಸ ವಿಚಾರಗಳತ್ತ, ಹೊಸ ಹೊಸ ಸಂವೇದನೆಗಳತ್ತ ಓದುಗರನ್ನು ಕೈಬೀಸಿ ಕರೆಯುತ್ತವೆ. ಮನುಷ್ಯ ಸಂಬಂಧಗಳನ್ನು ನಿಜದ ವಿಸ್ತರಣೆಗೆ ಒಳಪಡಿಸಿ ಬರೆದಿರುವ ಲೇಖನಗಳಿವು. ಜಾಗತಿಕ ಮತ್ತು ರಾಷ್ಟ್ರೀಯ ವಿದ್ಯಮಾನಗಳ ವಿವಿಧ ಆಯಾಮಗಳನ್ನು ಸಮರ್ಪಕವಾಗಿ ಅರಿಯಲು ಸಹಕಾರಿಯಾಗಿವೆ.

ನಿಲ