Gandhakuti

ಬಂಜಗೆರೆ ಜಯಪ್ರಕಾಶ್ ಅವರ  “ಸಮುದ್ರ ಮತ್ತು ಇತರ ಕವಿತೆಗಳು” ಕೃತಿಯು ತೆಲುಗಿನ ಕ್ರಾಂತಿಕಾರಿ ಕವಿ ವರವರರಾವ್ ಅವರ ಕವಿತೆಗಳ ಕನ್ನಡ ಅನುವಾದ.  ಈ ಕೃತಿ ಮೊದಲು ಮುದ್ರಣಗೊಂಡಿದ್ದು ೧೯೯೫ ರಲ್ಲಿ.  ವರವರ ರಾವ್ ಅವರ ಕಾವ್ಯಜೀವನದ ಇಪ್ಪತೈದು ವರ್ಷಗಳಲ್ಲಿ ಬಂದ ಎಲ್ಲ ಸಂಕಲನಗಳಿಂದ ಆಯ್ದ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಲಾಗಿದೆ. ತೆಲುಗು ಸಾಹಿತ್ಯ ಲೋಕದಲ್ಲಿ ಎಡಪಂಥೀಯ ಕ್ರಾಂತಿಕಾರಿ ಬುದ್ಧಿಜೀವಿಯಾಗಿ ರಾಜಕೀಯ ಲೋಕಕ್ಕೆ ವರವರ ರಾವ್ ಚಿರಪರಿಚಿತ.  ಆಂಧ್ರದ ಸಾಮಾಜಿಕ, ರಾಜಕೀಯ ಘಟನಾವಳಿಗಳೊಂದಿಗೆ ಅವರ ಕಾವ್ಯ ನಿಕಟವಾಗಿ ಬೆರೆತಿದೆ. ಕವಿ ಹಾಗೂ ಕಾವ್ಯ ಕಾಲ-ದೇಶಗಳನ್ನು ಮೀರಿ ಪ್ರಸ್ತುತವಾಗುವ ಗುಣವನ್ನು ಹೊಂದಿರುವ ವರವರರಾವ್ ಅವರ ಕವಿತೆಗಳನ್ನು ಇಲ್ಲಿನ ಸಂದರ್ಭಕ್ಕೂ ಹೊಂದಿಕೊಳ್ಳಬಹುದಾದ ಕವಿತೆಗಳನ್ನು ಆಯ್ದುಕೊಂಡು ಬಂಜೆಗೆರೆ ಜಯಪ್ರಕಾಶ್ ಅವರು ಅನುವಾದಿಸಿದ್ದಾರೆ.  ಇಲ್ಲಿನ ಕವಿತೆಗಳಲ್ಲಿ  ಅನುಭೂತಿ ಇದೆ.  ಆ ಅನುಭೂತಿಯು ಕವಿಯನ್ನು ಆವರಿಸಿರುವ ಸಂದರ್ಭದ ಕ್ರೌರ್ಯ ಮತ್ತು ಅಸಹಾಯಕತೆಗಳನ್ನು ಚಿತ್ರಿಸುತ್ತದೆ.  ಕವಿಯ ಮುಖ್ಯ ಆಶಯವಾದ ‘ಮಾನವ ಪ್ರೇಮ’ ಎಲ್ಲೆಡೆ  ಪಸರಿಸಲಿ ಎಂಬ ಆಶಯದೊಂದಿಗೆ ಅನುವಾದಗೊಂಡಿರುವ ಈ ಕೃತಿ  ಕನ್ನಡದ ಸಂದರ್ಭಕ್ಕೆ ಅಮೂಲ್ಯವಾದುದಾಗಿದೆ.

ಸಮುದ್ರ ಮತ್ತು ಇತರ ಕವಿತೆಗಳು